Spread the love
  • ಉಡುಪಿ:  ದಿನಾಂಕ 9-01-2023(ಹಾಯ್ ಉಡುಪಿ ನ್ಯೂಸ್) ಸಿಯೋದರಾಮ ರೆಡ್ಡಿ ಎಂಬವರು 15 ದಿನಗಳ ಹಿಂದೆ ಉಡುಪಿಗೆ ಕೂಲಿ ಕೆಲಸಕ್ಕೆಂದು ಬಂದು, ಆದಿಉಡುಪಿ ಕೃಷಿ ಉತ್ಪನ್ನ ಮಾರುಕಟ್ಟೆಯ ಒಳಗಿರುವ ಎಸ್‌.ಎಂ.ಟಿ ಮಳಿಗೆಯಲ್ಲಿ ಕೂಲಿ ಕೆಲಸ ಮಾಡಿ ಅಲ್ಲಿಯೇ ರಾತ್ರಿ ವೇಳೆ ಮಲಗುತ್ತಿದ್ದು, ದಿನಾಂಕ 07/01/2023 ರಂದು ರಾತ್ರಿ ಮಳಿಗೆಯಲ್ಲಿ ಮಲಗಿರುವಾಗ 11:45 ಗಂಟೆಗೆ ಬಿಜಾಪುರದ ಭೀಮನಗೌಡ ಎಂಬಾತನು ಬಂದು ಸಿಯೋದರಾಮ ರೆಡ್ಡಿ ಯನ್ನು ಉದ್ದೇಶಿಸಿ, ನಿನಗೆ ನಾನು ಇಲ್ಲಿ ಕೆಲಸ ಬಿಟ್ಟು ಹೋಗು ಎಂದು ಹೇಳಿದ್ದಲ್ಲ, ಇನ್ನು ಯಾಕೆ ಇಲ್ಲಿಯೇ ಇದ್ದೀಯಾ, ʼ ಎಂದು ಅವಾಚ್ಯ ಶಬ್ದಗಳಿಂದ ಬೈದು, ಅಲ್ಲಿಯೇ ಇದ್ದ ಮರದ ಕೋಲಿನಿಂದ ಸೊಂಟಕ್ಕೆ ಹೊಡೆದು ಸೊಂಟಕ್ಕೆ, ಎದೆಗೆ ನೋವು ಉಂಟುಮಾಡಿದ್ದಲ್ಲದೆ, ʼನೀನು ಇಲ್ಲಿ ಕೆಲಸ ಬಿಡದಿದ್ದರೆ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲʼ ಎಂದು ಜೀವ ಬೆದರಿಕೆ ಹಾಕಿರುತ್ತಾನೆ ಎಂದು ಸಿಯೋದರಾಮ ರೆಡ್ಡಿ ಪೊಲೀಸರಿಗೆ ದೂರನ್ನು ನೀಡಿದ್ದು ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
error: No Copying!