ಪಡಿತರ ವಿತರಣೆಗಾಗಿರುವ ಸರ್ವರ್ ಸಮಸ್ಯೆ ಪರಿಹರಿಸಿ ಅಥವಾ ಜನರಿಗೆ ಅನುಕೂಲವಾಗುವ ಪರ್ಯಾಯ ವ್ಯವಸ್ಥೆ ಜ್ಯಾರಿಗೊಳಿಸಿ : ಶ್ರೀ ರಾಮ ದಿವಾಣ
ಸರಕಾರದ ಸರ್ವರ್ ಸಮಸ್ಯೆಯಿಂದಾಗಿ ಪಡಿತರ ಚೀಟಿದಾರರಿಗೆ ಪಡಿತರ ಪಡೆದುಕೊಳ್ಳಲು ಬಹಳ ಸಮಸ್ಯೆಯಾಗಿ ಪರಿಣಮಿಸಿದೆ.
ಕೆಲವು ಮಂದಿ ಮಹಿಳೆಯರು ಅಡುಗೆ ಸಹಿತ ಮನೆ ಕೆಲಸಗಳನ್ನೆಲ್ಲ ಬದಿಗಿಟ್ಟು, ಇನ್ನು ಕೆಲವರು ತಮ್ಮ ತಮ್ಮ ಕೆಲಸ ಕಾರ್ಯಗಳಿಗೆ ರಜೆ ಹಾಕಿ ಸೊಸೈಟಿ ಅಥವಾ ನ್ಯಾಯಬೆಲೆ ಅಂಗಡಿಗಳಿಗೆ ಬಂದು ಅರ್ಧರ್ಧ ದಿನ ಸರತಿ ಸಾಲಲ್ಲಿ ನಿಲ್ಲುವುದು , ಕೊನೆಗೆ ಅಕ್ಕಿ ಸಿಗದೆ ಮನೆಗೆ ಮರಳುವುದು , ಮರುದಿನ ಮತ್ತೆ ಬಂದು ಸರತಿ ಸಾಲಲ್ಲಿ ನಿಲ್ಲುವುದು ಇದೇ ಆಗಿಹೋಗಿದೆ.
ಇದು ಯಾಕೆ ಹೀಗೆ ? ಸರ್ವರ್ ಸಮಸ್ಯೆಯನ್ನು ಪರಿಹರಿಸಲು ಸರಕಾರಕ್ಕೆ ಯಾಕೆ ಸಾಧ್ಯವಾಗುತ್ತಿಲ್ಲ ? ಒಂದು ಒಳ್ಳೆಯ ಜನಪರ ಯೋಜನೆಯನ್ನು ಜನರಿಗೆ ಅನುಕೂಲವಾಗುವ ಹಾಗೆ ಜ್ಯಾರಿಗೊಳಿಸುವ ಮನಸ್ಸೇಕೆ ಸರಕಾರಕ್ಕಿಲ್ಲ ?
ಸರ್ವರ್ ಸಮಸ್ಯೆ ಪರಿಹರಿಸಲು ? ಈ ನಿಟ್ಟಿನಲ್ಲಿ ಸರಕಾರ ತುರ್ತಾಗಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕಾಗಿ ನೊಂದ ನಾಗರಿಕರ ಪರವಾಗಿ ಮಾಹಿತಿ ಹಕ್ಕು ಕಾರ್ಯಕರ್ತ ಶ್ರೀರಾಮ ದಿವಾಣ ಸರ್ಕಾರವನ್ನು ಆಗ್ರಹಿಸಿದ್ದಾರೆ.