ಶಂಕರನಾರಾಯಣ: ದಿನಾಂಕ:20-12-2022 (ಹಾಯ್ ಉಡುಪಿ ನ್ಯೂಸ್) ನಡೆದಾಡುವ ದಾರಿಗೆ ತಡೆ ಬೇಲಿ ಹಾಕಿದ್ದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ ನಡೆಸಿದ ಘಟನೆ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕುಂದಾಪುರ ತಾಲೂಕು,ಕುಳ್ಳುಂಜೆ ಭಾಗೀಮನೆ ನಿವಾಸಿ ಶೇಖರ (48) ಇವರ ಮನೆಯವರಿಗೂ ಅದೇ ಗ್ರಾಮದ ಜಯರಾಮ ಹಾಲಂಬಿ , ಹಾಗೂ ನವೀನ ಹಾಲಂಬಿ ಭಾಗೀಮನೆ ಕುಳ್ಳುಂಜೆ ಇವರಿಗೂ ಕುಂದಾಪುರ ತಾಲೂಕಿನ ಕುಳ್ಳುಂಜೆ ಗ್ರಾಮದ ಭಾಗೀಮನೆ ಎಂಬಲ್ಲಿ ನಡೆದಾಡುವ ದಾರಿಯ ಬಗ್ಗೆ ಹಿಂದಿನಿಂದಲೂ ವಿವಾದ ಇರುತ್ತದೆ ಎನ್ನಲಾಗಿದೆ.
. ದಿನಾಂಕ 19/12/2022 ರಂದು ಬೆಳಿಗ್ಗೆ ಜಯರಾಮ ಹಾಲಂಬಿ ಹಾಗೂ ನವೀನ ಹಾಲಂಬಿ ಯವರುಗಳು ಶೇಖರ ಹಾಗೂ ಅವರ ಮನೆಯವರು ನಡೆದಾಡುವ ದಾರಿಯನ್ನು ಕಲ್ಲು ಕಂಬ ಹಾಕಿ ಬೇಲಿ ಮಾಡಲು ತಯಾರು ಮಾಡುತ್ತಿದ್ದರು ಎಂದಿದ್ದು. ಈ ಸಮಯ ಶೇಖರ ಹಾಗೂ ಅವರ ಸಹೋದರಿ ಜಯರಾಮ ಹಾಲಂಬಿ ಹಾಗೂ ನವೀನ ಹಾಲಂಬಿ ಅವರಲ್ಲಿ ನಮ್ಮ ಜಾಗಕ್ಕೆ ಬೇಲಿ ಹಾಕಬೇಡಿ ಎಂದಾಗ ಅವರು ಅವಾಚ್ಯ ಶಬ್ದಗಳಿಂದ ಬೈದು ಜಯರಾಮ ಹಾಲಂಬಿ ಮರದ ದೊಣ್ಣೆಯಿಂದ ಶೇಖರ ರವರ ಹಣೆಯ ಎಡಬದಿಗೆ ಹಾಗೂ ಬೆನ್ನಿಗೆ ಹಲ್ಲೆ ಮಾಡಿರುತ್ತಾರೆ ಎಂದು ದೂರಿದ್ದಾರೆ.
ಆಗ ಶ್ರೀಮತಿ ಶೈಲಜಾ ಇವರು ಓಡಿ ಹೋಗಿ ನನ್ನ ಅಣ್ಣನಿಗೆ ಯಾಕೇ ಹೊಡೆಯುತ್ತೀರಿ ಎಂದು ಕೇಳಿದಾಗ ಅವರಿಗೂ ನವೀನ್ ಹಾಲಂಬಿ ದೊಣ್ಣೆಯಿಂದ ಬೆನ್ನಿಗೆ ಹೊಡೆದಿರುತ್ತಾನೆ ಎಂದಿದ್ದಾರೆ. ಗಾಯಾಳುಗಳು ಚಿಕಿತ್ಸೆಯ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.