ಉಡುಪಿ: ಅಕ್ಟೋಬರ್ 25 ( ಹಾಯ್ ಉಡುಪಿ ನ್ಯೂಸ್) ಉಡುಪಿಯ ಖ್ಯಾತ ಬುಲೆಟ್ ಮೆಕ್ಯಾನಿಕ್ , ಇಂದ್ರಾಳಿಯ ಬುಲೆಟ್ ಗ್ಯಾರೇಜ್ ಮಾಲೀಕ ರಶೀದ್ ರವರು ನಿನ್ನೆ ರಾತ್ರಿ ವಿಧಿವಶರಾಗಿದ್ದಾರೆ.
ಬುಲೆಟ್ ಮೆಕ್ಯಾನಿಕ್ ಆಗಿ ಸುಮಾರು ಐವತ್ತು ವರ್ಷಗಳ ಅನುಭವ ಹೊಂದಿದ್ದ ಹಾಗೂ ಉಡುಪಿಯ ಬುಲೆಟ್ ಪ್ರಿಯರಿಗೆ ತನ್ನ ಇಂದ್ರಾಳಿಯ ಗ್ಯಾರೇಜ್ ನಲ್ಲಿ ನಗುಮೊಗದ ಸೇವೆ ಯನ್ನು ನೀಡುತ್ತಾ ಎಲ್ಲರ ಬಾಯಲ್ಲೂ ಬುಲೆಟ್ ರಶೀದ್ ಭಾಯಿ ಎಂದು ಚಿರಪರಿಚಿತರಾಗಿದ್ದ ಬುಲೆಟ್ ರಶೀದ್ ನಿನ್ನೆ ರಾತ್ರಿ ಹ್ರದಯಾಘಾತದಿಂದ ನಿಧನರಾಗಿದ್ದು ಬಂಧು,ಬಳಗ ಹಾಗೂ ಅಪಾರ ಬುಲೆಟ್ ಮಿತ್ರರನ್ನು ಅಗಲಿದ್ದಾರೆ.