ಗಂಗೊಳ್ಳಿ: ಅಕ್ಟೋಬರ್ 20(ಹಾಯ್ ಉಡುಪಿ ನ್ಯೂಸ್) ಗಂಗೊಳ್ಳಿ ಪರಿಸರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ದಂಧೆ ಎಗ್ಗಿಲ್ಲದೆ ನಡೆಸುತ್ತಿದ್ದ ವ್ಯಕ್ತಿ ಯನ್ನು ಪೋಲಿಸ್ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ.
ಗಂಗೊಳ್ಳಿ ಠಾಣೆಯ ಪಿಎಸ್ಐ ಯವರಾದ ವಿನಯ್ ಕೊರ್ಲಹಳ್ಳಿಯವರು ದಿನಾಂಕ: 19-10-2022 ರಂದು ಠಾಣೆಯಲ್ಲಿರುವಾಗ ಗಂಗೊಳ್ಳಿ ಗ್ರಾಮದ ಫಿಶ್ ಮಾರ್ಕೆಟ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಶಂಕರ ಪೂಜಾರಿ ಎಂಬುವವರು ಅಕ್ರಮವಾಗಿ ಮಟ್ಕಾ ಜುಗಾರಿ ನಡೆಸುತ್ತಿರುವ ಬಗ್ಗೆ ಗಂಗೊಳ್ಳಿ ಗ್ರಾಮದ ಬೀಟ್ ಸಿಬ್ಬಂದಿ ಪಿ.ಸಿ ಸಚಿನ್ ರವರು ನೀಡಿದ ಖಚಿತ ಮಾಹಿತಿಯಂತೆ ಠಾಣಾ ಸಿಬ್ಬಂದಿಗಳೊಂದಿಗೆ ಆ ಕೂಡಲೇ ಸ್ಥಳಕ್ಕೆ ದಾಳಿ ನಡೆಸಿದಾಗ ಅಲ್ಲಿ ಸಾರ್ವಜನಿಕರನ್ನು ಸೇರಿಸಿ ಮಟ್ಕಾ ಜುಗಾರಿ ನಡೆಸುತ್ತಿದ್ದ ಕುಂದಾಪುರ ತಾಲೂಕು, ಗಂಗೊಳ್ಳಿ ಗ್ರಾಮದ, ಸಸಿಹಿತ್ಲು,ಫಿಶ್ ಮಾರ್ಕೆಟ್ ಬಳಿ ನಿವಾಸಿ ಶಂಕರ ಪೂಜಾರಿ (52) ಎಂಬವನನ್ನು ಬಂಧಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಾನು ಸ್ವಂತ ಲಾಭಕ್ಕೋಸ್ಕರ ಮಟ್ಕಾ ಚೀಟಿ ಬರೆಯುತ್ತಿರುವುದಾಗಿ ಪೋಲಿಸರಿಗೆ ತಿಳಿಸಿರುತ್ತಾನೆ. ಈತ ಮಟ್ಕಾ ಜುಗಾರಿಗೆ ಬಳಸಿದ ಮಟ್ಕಾ ಚೀಟಿ, ಬಾಲ್ ಪೆನ್ನು, ಹಾಗೂ 675/- -ರೂ ನಗದನ್ನು ಪೊಲೀಸರು ಸ್ವಾಧೀನ ಪಡಿಸಿಕೊಂಡಿದ್ದು, .ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.