ಮಣಿಪಾಲ: ಸೆಪ್ಟೆಂಬರ್ 30 (ಹಾಯ್ ಉಡುಪಿ ನ್ಯೂಸ್) ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಯುವಕರನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಮಣಿಪಾಲ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ರಾಜಶೇಖರ ವಂದಲಿ ಇವರಿಗೆ ದಿನಾಂಕ 28-09-2022 ರಂದು ದೊರೆತ ಖಚಿತ ಮಾಹಿತಿಯ ಮೇರೆಗೆ ಮಣಿಪಾಲದ ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಗಾಂಜಾವನ್ನು ಸೇವಿಸಿರುವ ಸಂದೇಹದ ಮೇಲೆ ಏಕಾನ್ಷ್ ರೋಹಿತ್ ಅಗರ್‌ವಾಲ್ (21), ಆದರ್ಶ್ ಮೋಹನ್ (21), ವೇದಾಂತ್ ಶೆಟ್ಟಿ (20) , ಷಬ್ ಜೋತ್ ಸಂಧು (21), ಕೊಮ್ಮುರಿ ಸಿದ್ಧಿ ಸುಹಾಸ್ (20) ಪುನೀತ್ ನರಪರಾಜು (21),ಯಶ್ ಶರ್ಮಾ (19),ಪ್ರಥಮೇಶ್.ಬಿ.ಪೈ (20), ರೋಹನ್ ಖ್ಯಾನಿ (20), ಯಶ್ ಮಯೂರ್ ದೋಳಿ (20) ಯಶ್ ಇಶ್ರಿತ್ ತಿನ್ದೇವಾಲ್ (20) ಎಂಬವರನ್ನು ವಶಕ್ಕೆ ಪಡೆದು ಗಾಂಜಾ ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು , ವೈದ್ಯಾಧಿಕಾರಿಗಳು ದಿನಾಂಕ 29/09/2022 ರಂದು ಇವರೆಲ್ಲರೂ ಗಾಂಜಾ ಸೇವನೆ ಮಾಡಿರುವ ಬಗ್ಗೆ ದೃಢಪತ್ರವನ್ನು ನೀಡಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.