ಬೈಂದೂರು: ಸೆಪ್ಟೆಂಬರ್ 30 ( ಹಾಯ್ ಉಡುಪಿ ನ್ಯೂಸ್) ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಹೆರೂರು ಗ್ರಾಮದಲ್ಲಿ ಇಸ್ಪೀಟು ಜುಗಾರಿ ಆಡುತ್ತಿದ್ದವರನ್ನು ಬಂಧಿಸಿದ ಘಟನೆ ನಡೆದಿದೆ.
ಬೈಂದೂರು ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ನಿರಂಜನ ಗೌಡ ಬಿ.ಎಸ್ ಇವರಿಗೆ ದಿನಾಂಕ 27-09-2022 ರಂದು ಬೈಂದೂರು ತಾಲೂಕು ಹೆರೂರು ಗ್ರಾಮದ ಚಿಕ್ತಾಡಿ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಹೋಗುವ ಮಣ್ಣು ರಸ್ತೆಯ ಸಮೀಪದ ಸರಕಾರಿ ಹಾಡಿಯ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟು ಇಸ್ಪೀಟು ಎಲೆಗಳಿಂದ ಅಂದರ್ ಬಾಹರ್ ಎಂಬ ಇಸ್ಪೀಟು ಜುಗಾರಿ ಆಟ ನಡೆಯುತ್ತಿದೆ ಎಂದು ಬಂದ ಖಚಿತ ಮಾಹಿತಿಯಂತೆ ಕೂಡಲೇ ದಾಳಿ ಮಾಡಿದಾಗ ಅಲ್ಲಿ ಇಸ್ಪೀಟು ಜುಗಾರಿ ಆಡುತ್ತಿದ್ದ 1) ಶ್ರೀನಿವಾಸ ದೇವಾಡಿಗ, 2) ಉಪೇಂದ್ರ ಗಾಣಿಗ, 3) ಬಾಬಣ್ಣ ಮೊಗವೀರ, 4) ದುರ್ಗಾ ಪೂಜಾರಿ, 5) ಪ್ರಶಾಂತ ಪೂಜಾರಿ ಎಂಬವರನ್ನು ಬಂಧಿಸಿ, ವಶಕ್ಕೆ ಪಡೆದುಕೊಂಡು ಅವರು ಅಂದರ್ ಬಾಹರ್ ಜುಗಾರಿ ಆಟಕ್ಕೆ ಉಪಯೋಗಿಸಿದ ಸೊತ್ತುಗಳಾದ 1) ಪ್ಲಾಸ್ಟಿಕ್ ಟೇಬಲ್ -1, 2) ಪ್ಲಾಸ್ಟಿಕ್ ಕುರ್ಚಿ-2 3) ಡೈಮಾನ್,ಆಟಿನ್. ಇಸ್ಪೀಟ್, ಕಳವಾರ್ ಚಿತ್ರಗಳಿರುವ 52 ಇಸ್ಪೀಟ್ ಎಲೆಗಳು 4) ನಗದು ರೂಪಾಯಿ 21,800/-, 5) ಬೆಟ್ ಶೀಟ್ -2 ನ್ನು ಸ್ವಾಧೀನಪಡಿಸಿಕೊಂಡಿದ್ದು ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.