Spread the love

ತಿರುವನಂತಪುರ: ಸೆಪ್ಟೆಂಬರ್ 29(ಹಾಯ್ ಉಡುಪಿ ನ್ಯೂಸ್) ಕೇಂದ್ರ ಸರ್ಕಾರವು ಐದು ವರ್ಷಗಳ ಅವಧಿಗೆ ಪಿಎಫ್ಐ (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ಸಂಘಟನೆಯನ್ನು ನಿಷೇಧಿಸಿದ ಬೆನ್ನಲ್ಲೇ ಪಿಎಫ್ಐ ಸಂಘಟನೆ ಪ್ರಬಲವಾಗಿರುವ ಕೇರಳದಲ್ಲಿ ಕೇರಳ ಸರ್ಕಾರವು ಪಿಎಫ್ಐ ಹಾಗೂ ಅದರ ಸಹ ಸಂಸ್ಥೆಗಳನ್ನು ರಾಜ್ಯದಲ್ಲಿ ನಿಷೇಧಿಸಲು ಕ್ರಮ ಕೈ ಗೊಂಡಿದೆ.ಈ ಬಗ್ಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆದೇಶ ಹೊರಡಿಸಿದ್ದಾರೆ.

ಜಾಗತಿಕ ಮಟ್ಟದ ಭಯೋತ್ಪಾದನಾ ಸಂಘಟನೆ ಐಎಸ್ ಮತ್ತು ಇತರ ಉಗ್ರಗಾಮಿ ಸಂಘಟನೆ ಗಳ ಜೊತೆಗೆ ನಂಟು ಹೊಂದಿದೆ ಹಾಗೂ ದೇಶದಲ್ಲಿ ಕೋಮು ದ್ವೇಷ ಹರಡಲು ಸಂಘಟನೆ ಯತ್ನಿಸುತ್ತಿದೆ ಎಂದು ಆರೋಪಿಸಿ ಸಂಘಟನೆಯನ್ನು ನಿಷೇಧಿಸಲಾಗಿದೆ.

error: No Copying!