Spread the love

  • ಮಣಿಪಾಲ: ಸೆಪ್ಟೆಂಬರ್ 28 ( ಹಾಯ್ ಉಡುಪಿ ನ್ಯೂಸ್) ಮಣಿಪಾಲ ಪೊಲೀಸ್ ಠಾಣಾ, ಪೊಲೀಸ್‌ ಉಪನಿರೀಕ್ಷಕರಾದ ರಾಜಶೇಖರ ವಂದಲಿರವರು ದಿನಾಂಕ 26-09-2022 ರಂದು ರೌಂಡ್ಸ್‌ ಕರ್ತವ್ಯದಲ್ಲಿದ್ದಾಗ ಮಣಿಪಾಲದ ಎಂಡ್‌ ಪಾಯಿಂಟ್‌ ಬಳಿ ಸಾರ್ವಜನಿಕ ಸ್ಥಳದಲ್ಲಿ  ದಿಲ್ಬರ್  ಶಾಕಿರ್‌ ಎಮ್(22) ಎಂಬಾತ ಇನ್ನೋರ್ವ ನಿತಿನ್
  • ಪಿ (21) ಎಂಬವನು ಹಾಗೂ ಮಣಿಪಾಲದ ಶೀಂಬ್ರಾ ಸೇತುವೆ ಬಳಿ ಶಬಿಬ್ (21) ಎಂಬವನು ಅಮಲಿನಲ್ಲಿರುವುದು ಕಂಡು ಬಂದಿದ್ದು, ಅವರ ಬಳಿ ಹೋಗಿ ಪೊಲೀಸರು ಪರಿಶೀಲಿಸಿ, ವಿಚಾರಿಸಿದಾಗ ಅವರ ಬಾಯಿಯಿಂದ ಗಾಂಜಾದಂತಹ ಘಾಟು ವಾಸನೆ ಬರುತ್ತಿದ್ದು ಈ ಮೂವರು ಮಾದಕ ವಸ್ತು ಗಾಂಜಾವನ್ನು ಸೇವಿಸಿರುವ ಬಗ್ಗೆ ಅನುಮಾನ ಬಂದ ಮೇರೆಗೆ  ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಗಳು ದಿನಾಂಕ 27/09/2022 ರಂದು ದೃಢಪತ್ರವನ್ನು ನೀಡಿರುತ್ತಾರೆ.‌ ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಈ ಮೂವರ ಮೇಲೂ ಪ್ರಕರಣ ದಾಖಲಾಗಿರುತ್ತದೆ.
error: No Copying!