- ಉಡುಪಿ: ಸೆಪ್ಟೆಂಬರ್ 22 ( ಹಾಯ್ ಉಡುಪಿ ನ್ಯೂಸ್) ಮಣಿಪಾಲದ ವಿದ್ಯಾರತ್ನ ನಗರದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ನಾಲ್ವರು ಯುವಕರನ್ನು ಪೋಲಿಸರು ಬಂಧಿಸಿದ್ದಾರೆ.
- ದಿನಾಂಕ 20-09-2022ರಂದು ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆ, ಪೊಲೀಸ್ ಉಪ ನಿರೀಕ್ಷಕರಾದ ನಾರಾಯಣ ರವರಿಗೆ ಬಂದ ಖಚಿತ ಮಾಹಿತಿಯಂತೆ ಉಡುಪಿ ತಾಲೂಕು, ಮಣಿಪಾಲ ವಿದ್ಯಾರತ್ನ ನಗರದ ರೊಯಲ್ ಎಂಬಸ್ಸಿ ಬಳಿಯ ಸಾರ್ವಜನಿಕ ಸ್ಥಳಕ್ಕೆ ದಾಳಿ ನಡೆಸಿದಾಗ ಮೇಲ್ನೋಟಕ್ಕೆ ಮಾದಕ ವಸ್ತು ಸೇವಿಸಿರುವಂತೆ ಕಂಡು ಬಂದ 1. ಕರಣ್ ಆರ್ ಕೆ (21) 2 . ಪೂರ್ಣ ಸೋಮೇಶ್ವರ (23) 3. ನಿಯಾಲ್ ಗೋವೆಸ್ (20) 4. ಕೆನ್ನೆತ್ ಡಿಸೋಜ (27) ಎಂಬವರನ್ನು ವಶಕ್ಕೆ ಪಡೆದು, ಮೆಡಿಕಲ್ ತಪಾಸಣೆಗೊಳಪಡಿಸಿ ದಿನಾಂಕ 21/09/2022 ರಂದು ಮಣಿಪಾಲ ಕೆ.ಎಂ.ಸಿ. ಫಾರೆನ್ಸಿಕ್ ವಿಭಾಗದಿಂದ ತಜ್ಞ ವರದಿಯನ್ನು ಸ್ವೀಕರಿಸಿ, ವರದಿಯಲ್ಲಿ ಈ ನಾಲ್ವರೂ ಗಾಂಜಾ ಸೇವನೆ ಮಾಡಿರುವುದು ಖಚಿತಪಟ್ಟಿರುವುದರಿಂದ ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ನಾಲ್ವರ ಮೇಲೂ 27 (b) ಎನ್.ಡಿ.ಪಿ.ಎಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿದೆ.