“ಕುಂದಾಪುರ: ಸೆಪ್ಟೆಂಬರ್ ೮(ಹಾಯ್ ಉಡುಪಿ ನ್ಯೂಸ್) ಉಡುಪಿ ಜಿಲ್ಲೆಯ ಕೋಟೇಶ್ವರದ ಕಾಲೇಜೊಂದರಲ್ಲಿ ಪ್ರಾಂಶುಪಾಲರ ಕೊಠಡಿಯ ಬೀಗ ಮುರಿದು ಕಳ್ಳತನ ಕ್ಕೆ ವಿಫಲ ಯತ್ನವನ್ನು ನಡೆಸಿದ ಬಗ್ಗೆ ದೂರು ದಾಖಲಾಗಿದೆ.
ರಾಜೇಂದ್ರ ಎಸ್ ನಾಯಕ್ (54) ರವರು ಕೋಟೇಶ್ವರ ಶ್ರೀ ಕಾಳಾವರ ವರದರಾಜ ಎಂ ಶೆಟ್ಟಿ,ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದು ದಿನಾಂಕ 05/09/2022 ರಂದು ಸಂಜೆ 05:30 ಗಂಟೆಗೆ ಕಾಲೇಜಿನ ಕಛೇರಿ ಸಹಾಯಕರು ಕಾಲೇಜಿನ ಕಛೇರಿ ಹಾಗೂ ಗೇಟಿಗೆ ಬೀಗ ಹಾಕಿ ತೆರಳಿದ್ದು, ದಿನಾಂಕ 06/09/2022 ರಂದು ಬೆಳಗ್ಗಿನ ಜಾವ 02:00 ಗಂಟೆಗೆ ಯಾರೋ ಕಳ್ಳರು ಕಾಲೇಜಿನ ಒಳಪ್ರವೇಶಿಸಿ ಪ್ರಾಂಶುಪಾಲರ ಕೊಠಡಿ ಮತ್ತು ಆಫೀಸು ಕೊಠಡಿಯ ಬೀಗವನ್ನು ಮುರಿದು ಪ್ರಾಂಶುಪಾಲರ ಕೊಠಡಿ ಮತ್ತು ಆಫೀಸಿನಲ್ಲಿದ್ದ ಕಪಾಟುಗಳನ್ನು ತೆರೆದು ಕಳವು ಮಾಡಲು ಪ್ರಯತ್ನಿಸಿರುತ್ತಾರೆ ಎಂದು ಪ್ರಾಂಶುಪಾಲರು ದೂರು ನೀಡಿದ್ದಾರೆ.ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.”