ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ, ಮಾಜಿ ಸಿಎಂ ಸಿದ್ಧರಾಮಯ್ಯ ಅವರ ಮೇಲೆ ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆದುದು ಎಲ್ಲರೂ ತೀವ್ರವಾಗಿ ಖಂಡಿಸಬೇಕಾದ ಅತ್ಯಂತ ಹೇಯವಾಗ ಘಟನೆ.
ಈ ಘಟನೆಗೆ ರಾಜ್ಯದ ಬಿಜೆಪಿ ಸರಕಾರವೇ ನೇರ ಹೊಣೆ. ಗುಪ್ತಚರ ಇಲಾಖೆಯ ವೈಫಲ್ಯವೂ, ಪೊಲೀಸರು ಬಿಜೆಪಿ ಏಜೆಂಟರಾಗಿ ಬದಲಾದುದು ಮತ್ತು ಆರೆಸ್ಸೆಸ್ ಪರಿವಾರದ ನಾಯಕರು ಲಾಗಾಯ್ತಿನಿಂದಲೂ ತಮಗಾಗದವರ ಮೇಲೆ ದೈಹಿಕವಾಗಿ ದಾಳಿ ನಡೆಸಬಹುದು ಎಂಬ ರೀತಿಯಲ್ಲಿ ತಮ್ಮ ಕಾರ್ಯಕರ್ತರಿಗೆ ನಿರಂತರವಾಗಿ ಪ್ರಚೋದನೆ ನೀಡುತ್ತಾ ಬರುತ್ತಿರುವುದು ಇಂಥ ಕೃತ್ಯಗಳು ಎಲ್ಲೆಡೆ ನಡೆಯುತ್ತಿರಲು ಮುಖ್ಯ ಕಾರಣವಾಗಿದೆ.
ರಾಜ್ಯದಲ್ಲಿ ಬಿಜೆಪಿ ಸರಕಾರ ಇರುವವರೆಗೆ ಮತ್ತು ಆರೆಸ್ಸೆಸ್ ಪರಿವಾರ ಮತ್ತು ಹಿಂದುತ್ವ ಸಿದ್ಧಾಂತ ಸಕ್ರಿಯವಾಗಿರುವವರೆಗೆ ಇಂಥ ಘಟನೆಗಳು ನಡೆಯುತ್ತಲೇ ಇರುತ್ತದೆ ಎಂಬುದನ್ನು ತಿಳಿದಿರಬೇಕು
ಆರೆಸ್ಸೆಸ್ ಪರಿವಾರದ ಕಾರ್ಯಕರ್ತರಲ್ಲಿರುವ ಇಂಥ ಹೀನ ಮನಸ್ಥಿತಿಯನ್ನು ತೊಡೆದುಹಾಕುವ ನಿಟ್ಟಿನಲ್ಲಿ ಸರ್ವ ಪ್ರಜಾತಂತ್ರ ಪ್ರೇಮಿಗಳೂ, ಸಂವಿಧಾನನಿಷ್ಠರೂ ಆದವರು ತಳಮಟ್ಟದಲ್ಲಿ ದೂರದೃಷ್ಟಿಯ ಕಾರ್ಯತಂತ್ರಗಳನ್ನು ರೂಪಿಸುವ ಅಗತ್ಯವಿದೆ.
~ ಶ್ರೀರಾಮ ದಿವಾಣ
20/08/2022