Spread the love

ಭಾರತದಲ್ಲಿ ಮೌರ್ಯರ ಆಡಳಿತ, ಮೊಗಲರ ಆಳ್ವಿಕೆ ಕೊನೆ ಗೊಂಡಂತೆ ಭಾರತದಲ್ಲಿ ರಾಜರುಗಳ ಆಳ್ವಿಕೆ ಛಿದ್ರಗೊಂಡು ಬ್ರಿಟಿಷರು ಅದರ ಲಾಭ ಪಡೆದು ಬ್ರಿಟಿಷ್ ಆಳ್ವಿಕೆಯ ಪ್ರಾರಂಭವಾಯಿತು.ಬ್ರಿಟಿಷರು ಭಾರತವನ್ನು ತಮ್ಮ ವ್ಯಾಪಾರದ ಮಾರುಕಟ್ಟೆಯಾಗಿ ಬಳಸಿಕೊಂಡರು.
ಬ್ರಿಟಿಷ್ ಆಳ್ವಿಕೆಯಿಂದ ಬೇಸತ್ತ ಭಾರತೀಯರಲ್ಲಿ ಬ್ರಿಟಿಷ್ ಆಳ್ವಿಕೆ ಕೊನೆಗೊಳಿಸಬೇಕೆಂದು 1857ರಲ್ಲಿ ಬೆಂಗಾಲದಿಂದ ಪ್ರಾರಂಭಗೊಂಡ ಸ್ವಾತಂತ್ರ್ಯ ದ ಕಿಚ್ಚು ದೇಶ ವ್ಯಾಪಿ ಹರಡಿ 1947 ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ವನ್ನು ತಂದು ಕೊಟ್ಟಿತು. ವಿದ್ಯಾವಂತ ಭಾರತೀಯರು ಬ್ರಿಟಿಷರು ಭಾರತವನ್ನು ತಮ್ಮ ವ್ಯಾಪಾರದ ಮಾರುಕಟ್ಟೆಯಾಗಿ ಬಳಸುವ ಸತ್ಯವನ್ನು ಅರಿತುಕೊಂಡರು.ಬಹುಸಂಖ್ಯಾತ ಭಾರತೀಯರು ವಿದೇಶಿ ಆಳ್ವಿಕೆಯನ್ನು ,ವಿದೇಶಿ ನೀತಿಯನ್ನು ವಿರೋಧಿಸಿದರು. 1885ಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಅಸ್ತಿತ್ವಕ್ಕೆ ಬಂತು.ಭಾರತದ ಸ್ವಾತಂತ್ರ್ಯ ಸಂಗ್ರಾಮ ಇದರ ಮೂಲಕ ಒಂದು ಸಂಘಟಿತ ರೂಪ ಪಡೆಯಿತು. 1903 ರಿಂದ ದೇಶಾದ್ಯಂತ ಸಾರ್ವಜನಿಕ ಸಭೆ ನಡೆಸುವ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ರೂಪ ದೊರೆಯಿತು. 1905 ರಲ್ಲಿ ದೇಶಾದ್ಯಂತ ಸ್ವದೇಶಿ ಚಳುವಳಿಯ ಮೂಲಕ ಬ್ರಿಟಿಷ್ ವಸ್ತುಗಳನ್ನು ತಿರಸ್ಕರಿಸಲಾಯಿತು. ಬಾಲಗಂಗಾಧರ ತಿಲಕ್, ಬಿಪಿನ್ ಚಂದ್ರ ಪಾಲ್, ಲಜಪತ್ ರಾಯ್ ಮತ್ತು ಅರಬಿಂದೊ ಘೋಷ್ ರವರು ಭಾರತಾದ್ಯಂತ ಚಳುವಳಿ ಬೆಳೆಯಲು ಕಾರಣಕರ್ತರಾದರು. 1920 ರಲ್ಲಿ ಮಹಾತ್ಮ ಗಾಂಧಿಯ ನೇತೃತ್ವದಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಸತ್ಯಾಗ್ರಹದ ಹೊಸ ರೂಪ ಬಂದಿತು.

ಭಗತ್ ಸಿಂಗ್, ಶಿವರಾಮ್ ರಾಜಗುರು, ಸುಖ್ ದೇವ್ ಥಾಪರ್, ಚಂದ್ರಶೇಖರ ಆಜಾದ್ ಮತ್ತು ಸುಭಾಷ್ ಚಂದ್ರ ಬೋಸರು (ಆಜಾದ್ ಹಿಂದ್) ಗಳು ಬ್ರಿಟಿಷರ ಮೇಲೆ ಶಸ್ತ್ರಸಜ್ಜಿತ ದಾಳಿಗೆ ಸಿದ್ಧ ಗೊಳಿಸಿದರು.
ಅರವಿಂದೊ ಘೋಷ್, ವಿ.ಓ.ಚಿದಂಬರಂ ಪಿಳ್ಳೈ, ರವೀಂದ್ರನಾಥ ಠಾಗೋರ್, ಸುಬ್ರಹ್ಮಣ್ಯ ಭಾರತಿ,ಭಂಕಿಂ ಚಂದ್ರ ಚಟ್ಟೋಪಾಧ್ಯಾಯ ರಿಂದ ಸ್ವಾತಂತ್ರ್ಯ ದ ಕಾವು ಹೆಚ್ಚಿತು.
ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಮಹಿಳೆಯರೂ ಪಾಲ್ಗೊಳ್ಳುವಂತೆ ಮಹಿಳಾ ನಾಯಕಿಯರಾದ ಸರೋಜಿನಿ ನಾಯ್ಡು, ಪ್ರೀತಿ ಲತಾ ವಡೇದರ, ಕಸ್ತೂರ್ಬಾ ಗಾಂಧಿಯವರು ಸ್ವಾತಂತ್ರ್ಯ ದ ಭಾವನೆಯನ್ನು ಮಹಿಳೆಯರಲ್ಲಿ ಮೂಡಿಸಿದರು.
1942ರ ಆಗಸ್ಟ್ 8 ರಂದು ಕ್ವಿಟ್ ಇಂಡಿಯಾ ಚಳುವಳಿಯ ಮೂಲಕ ಮಹಾತ್ಮ ಗಾಂಧೀಜಿಯ ನೇತೃತ್ವದಲ್ಲಿ ಬ್ರಿಟಿಷ್ ರೇ ಭಾರತ ಬಿಟ್ಟು ತೊಲಗಿ ಎಂದು ಚಳುವಳಿಯಲ್ಲಿ ಭಾರತದ ಪ್ರಜೆಗಳೆಲ್ಲರೂ ಭಾಗಿಗಳಾದರು. “ಮಾಡು ಇಲ್ಲವೇ ಮಡಿ” ಎಂಬುದೇ ಧ್ಯೇಯ ವಾಕ್ಯವಾಯಿತು.
ಈ ರೀತಿ ಏಳು ಬೀಳುಗಳೊಂದಿಗೆ ಬೆಳೆದು ಬಂದ ಸ್ವಾತಂತ್ರ್ಯ ದ ಕಿಚ್ಚು 1947ರ ಆಗಸ್ಟ್ 15ರಂದು ಭಾರತಕ್ಕೆ ಸ್ವಾತಂತ್ರ್ಯವನ್ನು ದೊರಕಿಸಿ ಕೊಟ್ಟಿರುವುದು ಇಂದು ಭಾರತದ ಇತಿಹಾಸ.
ಇಂದು ಭಾರತ ದೇಶ ಸ್ವಾತಂತ್ರ್ಯ ದ ಅಮ್ರತ ಮಹೋತ್ಸವವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಾಯಕರುಗಳಾದ ಮಹಾತ್ಮ ಗಾಂಧಿ, ದಾದಾಬಾಯಿ ನವರೋಜಿ, ತಾತ್ಯಾ ಟೋಪೆ, ಕೆ.ಎಮ್. ಮುನ್ಶಿ, ಜವಾಹರಲಾಲ್ ನೆಹರು, ಸುಭಾಷ್ ಚಂದ್ರ ಬೋಸ್, ಸರ್ದಾರ್ ವಲ್ಲಭಭಾಯ್ ಪಟೇಲ್, ಲಾಲ್ ಬಹದ್ದೂರ್ ಶಾಸ್ತ್ರಿ, ಭಗತ್ ಸಿಂಗ್, ಬಿಪಿನ್ ಚಂದ್ರ ಪಾಲ್, ಲಾಲಾ ಲಜಪತ್ ರಾಯ್, ಬಾಲ ಗಂಗಾಧರ ತಿಲಕ್, ಅಶ್ಫಕುಲ್ಲ ಖಾನ್, ನಾನಾ ಸಾಹೇಬ್, ಸುಖ್ ದೇವ್, ಕನ್ವರ್ ಸಿಂಗ್, ಮಂಗಲ್ ಪಾಂಡೆ, ಸಿ.ರಾಜಗೋಪಾಲಾಚಾರಿ, ರಾಮ್ ಪ್ರಸಾದ್ ಬಿಸ್ ಮಿಲ್, ವಿನಾಯಕ ದಾಮೋದರ ಸಾವರ್ಕರ್, ಚಂದ್ರ ಶೇಖರ ಆಜಾದ್, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಬೇಗಂ ಹಜರತ್ ಮಹಲ್, ಅನ್ನಿ ಬೆಸೆಂಟ್, ಮೇಡಂ ಬಿಕಾಜಿ ಕಾಮ, ಕಸ್ತೂರ್ಬಾ ಗಾಂಧಿ, ಅರುಣಾ ಅಸಫ್ ಅಲಿ, ಸರೋಜಿನಿ ನಾಯ್ಡು, ಉಷಾ ಮೆಹ್ತಾ, ಕಮಲಾ ನೆಹರು, ವಿಜಯ ಲಕ್ಷ್ಮಿ ಪಂಡಿತ್ ,ಜಲ್ ಕಾರಿ ಬಾಯಿ, ಸಾವಿತ್ರಿ ಬಾಯಿ ಫುಲೆ, ಅಮ್ಮು ಸ್ವಾಮಿ ನಾಥನ್, ಕಿತ್ತೂರು ರಾಣಿ ಚೆನ್ನಮ್ಮ, ಅರಬಿಂದೊ ಘೋಷ್, ಲೋಕ ಮಾನ್ಯ ತಿಲಕ್, ಭಗವಾನ್ ಸಿಂಗ್, ಹರ್ ದಯಾಲ್, ಬರ್ ಕತುಲ್ಲಾ, ತಾರಕ್ ನಾಥ್ ದಾಸ್, ಡಾ.ಸ್ಯೆಫುದ್ದೀನ್ ಕಿಚ್ಲಿನ್, ಡಾ.ಸತ್ಯಪಾಲ್, ಮೋತಿಲಾಲ್ ನೆಹರು,ಕಮಲಾ ದೇವಿ ಚಟ್ಟೋಪಾಧ್ಯಾಯ, ಬಿ.ಆರ್.ಅಂಬೇಡ್ಕರ್,ಹಸ್ರತ್ ಮೊಹಾನಿ ,ಸ್ವಾಮಿ ಕುಮಾರಾನಂದ , ಶೇಷಾದ್ರಿ ಶ್ರೀನಿವಾಸ ಅಯ್ಯಂಗಾರ್, ಅಬ್ದುಲ್ ಹಪೀಜ್ ಮೊಹಮ್ಮದ್ ಬರ್ ಕತುಲ್ಲಾ, ಸುಭಾಷ್ ಚಂದ್ರ ಬೋಸ್ ರಂತಹ ಹಲವಾರು ನಾಯಕರನ್ನು ದೇಶಕ್ಕಾಗಿ ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿದ ಸ್ವಾತಂತ್ರ್ಯ ವೀರರನ್ನು , ದೇಶದ ಸ್ವಾತಂತ್ರ್ಯಕ್ಕಾಗಿ ಬಲಿಯಾದ ,ಅಮರರಾದ ಅದೆಷ್ಟೋ ವೀರ ಸ್ವಾತಂತ್ರ್ಯ ಹೋರಾಟಗಾರರನ್ನು ಇಂದು ಸ್ವಾತಂತ್ರೋತ್ಸವದ ಅಮ್ರತ ಮಹೋತ್ಸವದ ದಿನದಂದು ಸ್ಮರಿಸಿ ಅವರಿಗೆ ಶಿರ ಭಾಗಿ ನಮಿಸುತ್ತಾ …
ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿರುವುದು ಈಗ ಅಧಿಕಾರಕ್ಕಾಗಿ ಕಚ್ಚಾಡಿಕೊಳ್ಳುತ್ತಿರುವ ಕಾಂಗ್ರೆಸ್ ಅಥವಾ ಬಿಜೆಪಿ ಅಥವಾ ಇನ್ಯಾವುದೋ ರಾಜಕೀಯ ಪಕ್ಷಗಳು ಅಲ್ಲ. ಸ್ವಾತಂತ್ರ್ಯ ಹೋರಾಟವೇ ಬೇರೆ.ಇದೀಗಿನ ರಾಜಕೀಯ ಪಕ್ಷಗಳೇ ಬೇರೆ . ತಮ್ಮ ಬೇಳೆ ಬೇಯಿಸಿಕೊಳ್ಳಲು ಇದೀಗ ಸ್ವಾತಂತ್ರ್ಯ ಸಂಗ್ರಾಮವನ್ನು ತಮ್ಮ ಸಾಧನೆ ಎಂದು ಬಿಂಬಿಸಲು ಹೊರಟಿರುವ ರಾಜಕೀಯ ಪಕ್ಷಗಳಿಂದ ಸ್ವಾತಂತ್ರ್ಯ ಹೋರಾಟಗಾರರೆಲ್ಲರಿಗೂ ಅವಮಾನವಾದಂತೆ.
ಭಾರತದ ಸ್ವಾತಂತ್ರ್ಯ ಹೋರಾಟ ರಾಜಕೀಯ, ಜಾತಿ,ಮತ,ಭೇಧ ಭಾವವಿಲ್ಲದೆ ನಡೆದ ಸಂಘಟಿತ ಹೋರಾಟವಾಗಿದ್ದು ಇದನ್ನೇ ಮುಂದುವರಿಸಿ ಜಾತಿ,ಮತ,ಭೇಧ, ಭಾವವಿಲ್ಲದೆ, ರಾಜಕೀಯವಿಲ್ಲದೆ ಶಾಂತಿ,ಸಮ್ರಧ್ಧಿಯಿಂದ ಕೂಡಿದ ಬಲಿಷ್ಠ ಭಾರತ ನಿರ್ಮಾಣಕ್ಕಾಗಿ ಪ್ರತಿಯೋರ್ವ ಭಾರತೀಯ ಪ್ರಜೆ ಇಂದು ಪಣತೊಡೋಣ.
ನಾಡಿನ ಸಮಸ್ತ ಜನತೆಗೆ ಸ್ವಾತಂತ್ರ್ಯದ ಅಮ್ರತ ಮಹೋತ್ಸವದ ಶುಭಾಶಯಗಳು.
ಸಂಪಾದಕ. (ಹಾಯ್ ಉಡುಪಿ)

error: No Copying!