ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದ ಎಲ್ಲಾ ಸಂಸ್ಥಾನಗಳು ಬ್ರಿಟಿಷರ ಧೋರಣೆ , ಲೂಟಿ,
ಸಹಾಯಕ ಸೈನ್ಯ ಪದ್ಧತಿಯಂತಹ ದೇಶೀಯ ಸಂಸ್ಥಾನ ಗಳಿಗೆ ಆರ್ಥಿಕ ಹೊರೆ,
ಸಾಮಾಜಿಕ ಅಸ್ತವ್ಯಸ್ತ, ಮುಂತಾದವುಗಳಿಂದ ತತ್ತರಿಸಿ ಹೋಗಿದ್ದವು.
ಇಂತಹ ಸಮಯದಲ್ಲೇ ಮೈಸೂರು ಇವೆಲ್ಲವನ್ನೂ ಮೆಟ್ಟಿ ಮಾದರಿ ಸಂಸ್ಥಾನ ಎಂಬ ಹೆಗ್ಗಳಿಕೆ
ಹೊಂದಿದ್ದು ಮಾತ್ರ ನಿಜಕ್ಕೂ ನಮ್ಮೆಲ್ಲರ ಗರ್ವದ ವಿಷಯ. ಮೈಸೂರು ಸಂಸ್ಥಾನದ ಆಡಳಿತ,ಸಾಮಾಜಿಕ ವ್ಯವಸ್ಥೆ, ಆರ್ಥಿಕತೆ, ನ್ಯಾಯ, ಅಭಿವೃದ್ಧಿ ಕೆಲಸಗಳು, ಮಹಾನ್ ದಿವಾನರುಗಳ ಸೇವೆ, ರಾಜರ ಪ್ರಜಾ ನಿಷ್ಠೆ,ಆಡಳಿತ ವೈಖರಿ ಇವೆಲ್ಲವೂ ಆಗಿನ ಕಾಲದಲ್ಲಿಯೇ
ಮೈಸೂರು ಸಂಸ್ಥಾನವನ್ನು ದೇಶೀಯ ಇತರೆ ಸಂಸ್ಥಾನಗಳಿಗಿಂತ ಈ ವಿಚಾರಗಳಲ್ಲಿ 50 ವರ್ಷ
ಮುಂದೆ ಕೊಂಡೊಯ್ದಿತ್ತು.
*1882ರ ಪ್ರಜಾಪ್ರತಿನಿಧಿ ಸಭೆ ನಮ್ಮ ಒಕ್ಕೂಟದಲ್ಲಿ ಇಂದಿಗೂ ಚಾಲ್ತಿಯಲ್ಲಿರುವ ಹಳೆಯ ವಿಧಾನ ಪರಿಷತ್.
*1902 ರಲ್ಲೀ ನ್ಯಾಯ ವಿಧೇಯಕ ಸಭೆ ಆರಂಭಿಸಿ ,ಸರ್ವರಿಗೂ ನ್ಯಾಯದಾನ ಪರಿಕಲ್ಪನೆ .
*1905 ರಲ್ಲೀ ಬೆಂಗಳೂರು ಭಾರತದಲ್ಲಿಯೇ ಮೊದಲ ವಿದ್ಯುತ್ ಪಡೆದ ನಗರ .
*1919 ರ ಮಿಲ್ಲರ್ ಆಯೋಗ ಹಿಂದುಳಿದ ವರ್ಗಗಳಿಗೆ ಮೀಸಲಾತಿ.
1913ರಲ್ಲಿ ಮೈಸೂರು ಬ್ಯಾಂಕ್ ಸ್ಥಾಪನೆ , (ನಮ್ಮ ದುರಾದೃಷ್ಟ ಇಂದು ಕಳೆದುಕೊಂಡಿದ್ದೇವೆ).
1915 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ರಚನೆ.
1918 ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ.
1933 ಮೈಸೂರು ವಿವಿ
1936 ಮೈಸೂರು ಕಾಗದ ಕಾರ್ಖಾನೆ.
ಹೇಳಲು ಹೋದರೆ ದಿನಗಳೇ ಸಾಲದು, ಅಗೆದು ಮೊಗೆದಷ್ಟೂ ಅಭಿವೃದ್ಧಿ ಕಾರ್ಯಗಳು,
KRS ಜಲಾಶಯ, ಮಾರಿ ಕಣಿವೆ ಜಲಾಶಯ, ಬೃಂದಾವನ, ಮೈಸೂರು ಸಾಬೂನು ಮತ್ತು ಮಾರ್ಜಕ ಕಾರ್ಖಾನೆ, ಇಂದಿನ HAL , IISC ಗೆ ಭೂಮಿ , ವಿಸ್ತೃತ ರೈಲ್ವೇ ಜಾಲ, .ಇನ್ನೂ ಹಲವು .
ಕೊನೆಗೆ 1947 ಆಗಸ್ಟ್ 09 ರಂದು ಜಯ ಚಾಮರಾಜೇಂದ್ರ ಒಡೆಯರ್ ಅವರು ಒಕ್ಕೂಟಕ್ಕೆ ಸೇರುವ ಸಹಿ ಹಾಕಿ ಮೈಸೂರು ಸಂಸ್ಥಾನವನ್ನು ಭಾರತದ ಒಕ್ಕೂಟಕ್ಕೆ ವಿಲೀನಗೊಳಿಸಿದರು.
ಒಕ್ಕೂಟಕ್ಕೆ ಸೇರದೆ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ಒಗ್ಗೂಡಿಸಿಕೊಂಡು ಪ್ರತ್ಯೇಕ ಆಗಿದ್ದರೆ ಬಹುಶಃ ಇಂದು ವಿಶ್ವದ ಚಿಕ್ಕ ಭೂ ಪ್ರದೇಶ ಹೊಂದಿ ಬಲಿಷ್ಟ ರಾಷ್ಟ್ರಗಳೇನಿಸಿದ ಜರ್ಮನಿ, ಇಸ್ರೇಲ್, ಜಪಾನ್, ಸಿಂಗಾಪುರ,ಇಂಗ್ಲೆಂಡ್ ಗಳ ಸಾಲಿನಲ್ಲಿ ಇರುತ್ತಿತ್ತು.
ಇಂದಿನ gst ಮೋಸ, ಕರ್ನಾಟಕದಲ್ಲಿ ಹಿಂದಿಯನ್ನರ ದಬ್ಬಾಳಿಕೆ, ಕನ್ನಡಿಗರ ನಿರುದ್ಯೋಗ, ಬಡತನ, ಉತ್ತರದ ರಾಜಕೀಯ ಗುಲಾಮತನ ಮುಂತಾದ ಸಮಸ್ಯೆಗಳ ಪ್ರಮೇಯವೇ ಇರುತ್ತಿರಲಿಲ್ಲ.
💛❤️ ಸಿರಿಗನ್ನಡಂ ಗೆಲ್ಗೆ.
ನಿಜವಾದ ಕಲ್ಯಾಣ ರಾಜ್ಯ ಅದಾಗಿತ್ತು.💛❤️
✍️ಶಿವ.