(ಕವನ)
ನನ್ನ ದೇಶ ನನ್ನ ಜನ
ಬಾವುಟದಡಿ ನಿಂತಿಹೆವು.
ಜಾತಿ ಮತ ಪಂಥಗಳ
ಕಿಲುಬನೆಲ್ಲ ತೆಗೆದಿಹೆವು.
ಹಲವು ಬಗೆಯ ಭಾಷೆ
ಬಗೆ ಬಗೆಯ ವೇಷೆ.
ನೋಟ ನೂರಾದರೂ
ದೃಷ್ಟಿ ಮಾತ್ರ ಒಂದೆ.
ಹಸಿರೆ ನಮ್ಮ ಉಸಿರು.
ಸಮತೆ ನಮ್ಮ ಶಕ್ತಿ.
ಗಡಿಗಳೆಲ್ಲೆ ಮೀರಿ ನಾವು
ಶಾಂತಿ ಮಂತ್ರ ಪಠಿಸುವೆವು.
ದೇಹ ಭಾವ ಅಳಿಸಿ
ಜೀವ ಭಾವ ಬೆಳೆಸಿ
ಬಾನೆತ್ತರ ಏರಿ ನಿಂತು
ಜೀವದರ್ಥ ಕಂಡವರು.
ಮರ ಕೊಂಬೆ ಬೇರು ನಾವು
ಒಂದೆ ಬಳ್ಳಿ ಹೂಗಳು.
ಭಾರತಾಂಬೆ ನಮ್ಮ ತಾಯಿ
ನಮ್ಮ ಪೊರೆವ ಶಕ್ತಿಯೂ
.
೦ ವಿಶ್ವಾರಾಧ್ಯ ಸತ್ಯಂಪೇಟೆ