Spread the love

ಕಾರ್ಕಳ:  ಆಗಸ್ಟ್ 4 ( ಹಾಯ್ ಉಡುಪಿ ನ್ಯೂಸ್) ಮನೆಯ ಶೆಡ್ ನಲ್ಲಿ ಇರಿಸಿದ್ದ ಸ್ಕೂಟರ್ ಕಳ್ಳತನವಾಗಿರುವ ಬಗ್ಗೆ ದೂರು ದಾಖಲಾಗಿದೆ.

  ಸತ್ಯ ನಾರಾಯಣ ಭಟ್ (41), ಇಂದಾರು ಮನೆ ಬೆಳ್ಮಣ್ ಗ್ರಾಮ ಕಾರ್ಕಳ ತಾಲೂಕು ಇವರು ಮನೆಯ ಶೆಡ್ ನಲ್ಲಿ ಇಟ್ಟಿದ್ದ KA-20-EW-3452 ನೇ ನಂಬ್ರದ HONDA ACTIVE ಸ್ಕೂಟರನ್ನು ದಿನಾಂಕ 23/07/2022 ಸಂಜೆ 4:30 ಗಂಟೆಯಿಂದ 24/07/2022  ರಂದು ಬೆಳಿಗ್ಗೆ 09:00 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸ್ಕೂಟರಿನ ಮೌಲ್ಯ ರೂಪಾಯಿ 30,000/- ಆಗಿರುತ್ತದೆ ಎಂದು ದೂರು ನೀಡಿದ್ದು ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

error: No Copying!