ಕೋಟ: ಜುಲೈ 31(ಹಾಯ್ ಉಡುಪಿ ನ್ಯೂಸ್) ಕರ್ತವ್ಯ ನಿರತ ಪೋಲಿಸರ ಮೇಲೆ ವೇಗವಾಗಿ ವಾಹನ ಚಲಾಯಿಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಘಟನೆ ಕೋಟದಲ್ಲಿ ನಡೆದಿದೆ.
ದಿನಾಂಕ: 31/07/2022 ರಂದು ಕೋಟ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಮಧು ಬಿ.ಇ. ರವರು ಸಿಬ್ಬಂದಿಯವರೊಂದಿಗೆ ಕೋಟ ಹೈಸ್ಕೂಲ್ ಜಂಕ್ಷನ್ ಬಳಿ ವಾಹನ ತಪಾಸಣೆ ಮಾಡುತ್ತಿರುವಾಗ ಮಧ್ಯಾಹ್ನ 12:30 ಗಂಟೆಗೆ ಸಾಲಿಗ್ರಾಮ ಕಡೆಯಿಂದ ಕೋಟ ಕಡೆಗೆ ಸಿಲ್ವರ್ ಬಣ್ಣದ ನಂ: KA-20-EV-7107 ನೇ Suzuki Access 125 ನೇ ಸ್ಕೂಟಿಯಲ್ಲಿ 3 ಜನ ಅಪ್ರಾಪ್ತರಂತೆ ಕಾಣುವ ಯುವಕರು ತ್ರಿಬಲ್ ರೈಡ್ ನೊಂದಿಗೆ ಅದರ ಸವಾರ ಹೆಲ್ಮೇಟ್ ಕೂಡಾ ಧರಿಸದೇ ಅತೀವೇಗವಾಗಿ ಬರುತ್ತಿರುವುದನ್ನು ಕಂಡು ಸ್ಕೂಟಿ ಸವಾರನಿಗೆ ವಾಹನ ನಿಲ್ಲಿಸುವಂತೆ ಪೊಲೀಸರು ಸೂಚನೆ ನೀಡಿದರೂ ಸಹ ಸ್ಕೂಟಿ ಸವಾರನು ಮೋಟಾರ್ ಸೈಕಲ್ ಅನ್ನು ನಿಧಾನಿಸದೇ ಇನ್ನೂ ಹೆಚ್ಚಿನ ಎಕ್ಸಲೈಟರ್ ನೊಂದಿಗೆ ಅತೀವೇಗವಾಗಿ ಸವಾರಿ ಮಾಡಿಕೊಂಡು ಬಂದು ವಾಹನ ತಪಾಸಣೆ ಮಾಡುತ್ತಿದ್ದವರ ಮೈಮೇಲೆ ಬಂದಂತೆ ಚಲಾಯಿಸಿ, ಕರ್ತವ್ಯದಲ್ಲಿದ್ದ ಪೊಲೀಸರ ದೈಹಿಕ ಸುರಕ್ಷತೆಗೆ ಮತ್ತು ಪ್ರಾಣಕ್ಕೆ ಅಪಾಯವಾಗುವಂತೆ ಸಾರ್ವಜನಿಕ ರಸ್ತೆಯಲ್ಲಿ ಅತೀವೇಗ ಹಾಗೂ ಅಜಾಗರೂಕತೆಯಿಂದ ಮೋಟಾರ್ ಸೈಕಲ್ ಸವಾರಿ ಮಾಡಿ ಕೋಟ ಕಡೆಗೆ ಸ್ಕೂಟಿ ಚಲಾಯಿಸಿಕೊಂಡು ಹೋಗಿರುತ್ತಾರೆ ಎನ್ನಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.