.
ಉಡುಪಿ ಜುಲೈ ೨೩(ಹಾಯ್ ಉಡುಪಿ ನ್ಯೂಸ್ ) ಉಡುಪಿ CEN ಅಪರಾಧ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ 20 ಕಿಲೋ, 614 ಗ್ರಾಂ ಗಾಂಜಾ. Toyota ಕಂಪೆನಿಯ Glanza ಕಾರು ಹಾಗೂ 3 ಮೊಬೈಲ್ ಹ್ಯಾಂಡ್ ಸೆಟ್ ಗಳನ್ನು ವಶ ಪಡಿಸಿಕೊಂಡು ಮೂವರು ಆರೋಪಿಗಳನ್ನು ಬಂಧಸಿದ್ದಾರೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ವಿಷ್ಣುವರ್ಧನ, ಐ.ಪಿ.ಎಸ್. ಇವರ ನಿರ್ದೇಶನದಲ್ಲಿ, ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಎಸ್.ಟಿ ಸಿದ್ದಲಿಂಗಪ್ಪ ಇವರ ಮಾರ್ಗದರ್ಶನದಲ್ಲಿ, ಉಡುಪಿ ಜಿಲ್ಲಾ CEN ಅಪರಾಧ ಪೊಲೀಸ್ ಠಾಣಾ ನಿರೀಕ್ಷಕರಾದ ಮಂಜುನಾಥ ಇವರಿಗೆ ದಿನಾಂಕ: 23-07-2022 ರಂದು ದೊರೆತ ಖಚಿತ ಮಾಹಿತಿಯ ಮೇರೆಗೆ ಅವರು ಮೇಲಾಧಿಕಾರಿಯವರ ಅನುಮತಿ ಪಡೆದುಕೊಂಡು ಇಲಾಖಾ ಸಿಬ್ಬಂದಿಯವರ ಸಹಕಾರದೊಂದಿಗೆ ಬೆಳಿಗ್ಗೆ 11:45 ಗಂಟೆ ಸುಮಾರಿಗೆ ಉಡುಪಿ ತಾಲೂಕು ಪೆರ್ಡೂರು ಗ್ರಾಮದ ಜೋಗಿಬೆಟ್ಟು ಎಂಬಲ್ಲಿ ಎನ್. ಹೆಚ್. 169(A) ತಾರು ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಆಗುಂಬೆ-ಹೆಬ್ರಿ ಕಡೆಯಿಂದ ಕೆ.ಎ.20 ಎಂ.ಡಿ. 3719 ನೇ ನಂಬ್ರದ ನೀಲಿ ಬಣ್ಣದ ಕಾರಿನಲ್ಲಿ ಅಕ್ರಮವಾಗಿ ಗಾಂಜಾವನ್ನು ಸಾಗಾಟ ಮಾಡಲು ಬರುತ್ತಿದ್ದ ವಿಜಯ ಕುಮಾರ್ ಎಸ್. ಪ್ರಾಯ 23 ವರ್ಷ, ಕಟ್ಟಿನ ಮನೆ, ಹರಾವರಿ, ಚಿಕ್ಕಮಂಗಳೂರು ಜಿಲ್ಲೆ , ನಿಕ್ಷೇಪ್ ಎಸ್.ವಿ. ಪ್ರಾಯ 24 ವರ್ಷ, ಬೆಲೂರು ನರಸಿಂಹ ರಾಜ ಪುರ, ಚಿಕ್ಕಮಂಗಳೂರು. ನಿತೇಶ್ ಕುಮಾರ್, ಪ್ರಾಯ 22 ವರ್ಷ, : ಕುವೆಂಪು ನಗರ, 1 ನೇ ಕ್ರಾಸ್ ಮುರಾರ್ಜಿ ಹಾಸ್ಟೆಲ್ ಬಳಿ, ಗುಣವಂತೆ ಗ್ರಾಮ, ಕೊಪ್ಪ, ಚಿಕ್ಕಮಂಗಳೂರು ಎಂಬುವವರುಗಳನ್ನು ಬಂಧಿಸಿ ಅವರ ವಶದಲ್ಲಿದ್ದ ಯಾವುದೇ ಪರವಾನಿಗೆ ಇಲ್ಲದೇ, ಕಾನೂನು ಬಾಹಿರವಾಗಿ ಮಾರಾಟ ಮಾಡಲು ಹೊಂದಿದ್ದ 20 ಕಿಲೋ 614 ಗ್ರಾಂ ತೂಕದ ಗಾಂಜಾ, (ಅಂದಾಜು ಮೌಲ್ಯ ರೂ.6,09,000/-),ಗಿರಾಕಿ ಕುದುರಿಸಲು ಬಳಸುವ ಮೊಬೈಲ್ ಹ್ಯಾಂಡ್ ಸೆಟ್ ಗಳು -3 (ಅಂದಾಜು ಮೌಲ್ಯ ರೂ.15,000/-), ಕಾರಿನ ಅಂದಾಜು ಮೌಲ್ಯ ರೂ. 9,00,000/- , ನಗದು ಹಣ ರೂ. 6,000/-, ವನ್ನು ವಶಪಡಿಸಿಕೊಂಡಿರುತ್ತಾರೆ. ವಶಪಡಿಸಿಕೊಂಡ ಸ್ವತ್ತುಗಳ ಒಟ್ಟು ಮೌಲ್ಯ ರೂ. 15,30,000/-. ಆಗಿರುತ್ತದೆ. ಈ ಬಗ್ಗೆ ಸೆನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ಕಾರ್ಯಾಚರಣೆಯಲ್ಲಿ CEN ಪೊಲೀಸ್ ಠಾಣಾ ಸಿಬ್ಬಂದಿಗಳಾದ ಎ.ಎಸ್.ಐ ಕೇಶವ ಗೌಡ, ನಾಗೇಶ, ರಾಘವೇಂದ್ರ ಬ್ರಹ್ಮಾವರ, ಕೃಷ್ಣಪ್ರಸಾದ್, ಪ್ರವೀಣ್, ಜೀವನ್, ಪ್ರಶಾಂತ, ನಿಲೇಶ್, ದೀಕ್ಷಿತ್,ಮಾಯಪ್ಪ, ಜೀಪು ಚಾಲಕ ನವೀನ್ ಚಂದ್ರ ಮತ್ತು ತಾಂತ್ರಿಕ ವಿಭಾಗದ ದಿನೇಶ್ ರವರು ಪಾಲ್ಗೊಂಡಿರುತ್ತಾರೆ ಎನ್ನಲಾಗಿದೆ.