Spread the love

ಉಡುಪಿ: ಜುಲೈ 23 (ಹಾಯ್ ಉಡುಪಿ ನ್ಯೂಸ್) ಸಿಟಿ ಬಸ್ ನಿಲ್ದಾಣದ ಬಳಿ ಮಟ್ಕಾ ಜುಗಾರಿ ಆಟ ಆಡುತ್ತಿದ್ದವರನ್ನು ಪೋಲಿಸರು ಬಂಧಿಸಿದ ಘಟನೆ ನಡೆದಿದೆ.

ಉಡುಪಿ ನಗರ ಪೊಲೀಸ್‌ ಠಾಣೆಯ ಪಿಎಸ್ಐ (ತನಿಖೆ-1) ಶ್ರೀ ಪ್ರಸಾದ್ ಕುಮಾರ್ ಕೆ‌ ಉಡುಪಿ ಇವರು ದಿನಾಂಕ 22-07-2022 ರಂದು ಬೆಳಿಗ್ಗೆ 7-30 ಗಂಟೆಗೆ ಇಲಾಖಾ ಹೊಯ್ಸಳ ವಾಹನದಲ್ಲಿ ಉಡುಪಿ ಪೇಟೆಯಲ್ಲಿ ವಿಶೇಷ ಕರ್ತವ್ಯದಲ್ಲಿದ್ದಾಗ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಉಡುಪಿ  ಸಿಟಿ  ಬಸ್‌ ನಿಲ್ದಾಣದ  ಬಳಿಯಲ್ಲಿರುವ ಮಲ್ಪೆ ಬಸ್  ನಿಲ್ದಾಣದ  ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ಓರ್ವ ವ್ಯಕ್ತಿಯು ಮಟ್ಕಾ ಜುಗಾರಿ ಆಟದ ಬಗ್ಗೆ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿರುವುದಾಗಿ ಭಾತ್ಮಿದಾರೊಬ್ಬರು ನೀಡಿದ ಖಚಿತ ಮಾಹಿತಿಯಂತೆ  ಪಿಎಸ್ಐ ಯವರು ಮಾಹಿತಿಯನ್ನು ಪೊಲೀಸ್‌ ನಿರೀಕ್ಷಕರಿಗೆ ತಿಳಿಸಿ, ಅವರ ಆದೇಶದಂತೆ  ಠಾಣಾ ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ 07:45 ಗಂಟೆಗೆ ಧಾಳಿ ನಡೆಸಿ,  ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಚಂದ್ರ ಶೆಟ್ಟಿ ಮತ್ತು ಕರಿಯಪ್ಪ ಎಂಬಾತನನ್ನು ಬಂಧಿಸಿ ವಶಕ್ಕೆ ಪಡೆದು ವಿಚಾರಿಸಿದಾಗ ತಾನು ಕಮೀಷನ್‌ ಹಣಕೋಸ್ಕರ ಸಾರ್ವಜನಿಕರಿಂದ ಮಟ್ಕಾ ಜುಗಾರಿ ಆಟದ ಬಗ್ಗೆ ಹಣವನ್ನು ಸಂಗ್ರಹಿಸುತ್ತಿದ್ದು, ತಾನು ಸಂಗ್ರಹಿಸುತ್ತಿದ್ದ ಹಣವನ್ನು ಲಿಯೋ ಕರ್ನೆಲಿಯೋ ನ ಪರವಾಗಿ ಆತನ ಹೆಂಡತಿಯಾದ ಶ್ರೀಮತಿ  ಗ್ರೆಟ್ಟಾ ಬಾಯಿ ಎಂಬವರಿಗೆ ಕೊಡುತ್ತಿರುವುದಾಗಿ ತಿಳಿಸಿದ್ದು, ಆತನ ವಶದಿಂದ ಮಟ್ಕಾ ಜುಗಾರಿ ಆಟಕ್ಕೆ ಸಂಗ್ರಹಿಸಿದ ನಗದು ಹಣ ರೂ 3680 /- ಮತ್ತು ಮಟ್ಕಾ ನಂಬ್ರ ಬರೆದ ಚೀಟಿ- 1, ಬಾಲ್‌ಪೆನ್‌, ಮತ್ತು ಆವರ  ವಶದಲ್ಲಿದ್ದ ಅಂದಾಜು 800/- ರೂಪಾಯಿ ಮೌಲ್ಯದ ಲಾವ ಕಂಪೆನಿಯ ಕಪ್ಪು  ಬಣ್ಣದ   ಕೀ ಪ್ಯಾಡ್ ಮೊಬೈಲ್ ಫೋನ್‌ ಅದರಲ್ಲಿದ್ದ ಏರ್ ಟೆಲ್ ಸಿಮ್‌ ಅನ್ನು  ಸ್ವಾಧೀನಪಡಿಸಿಕೊಂಡಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

error: No Copying!