Spread the love

ಕುಂದಾಪುರ: ಜೂನ್ ೨೮( ಹಾಯ್ ಉಡುಪಿ ನ್ಯೂಸ್) ಕುಂಭಾಶಿಯಲ್ಲಿ ಸಾರ್ವಜನಿಕ ಸ್ಥಳವೊಂದರಲ್ಲಿ ಅಂದರ್ ಬಾಹರ್ ಜುಗಾರಿ ಆಡುತ್ತಿದ್ದವರನ್ನು ಪೋಲಿಸರು ಬಂಧಿಸಿದ ಘಟನೆ ನಡೆದಿದೆ.

ದಿನಾಂಕ 27/06/2022 ರಂದು ಕುಂದಾಪುರ ಪೊಲೀಸ್‌ ಠಾಣೆ, ಪೊಲೀಸ್ ಉಪನಿರೀಕ್ಷಕರಾದ ಸದಾಶಿವ ಆರ್ ಗವರೋಜಿರವರು  ರೌಂಡ್ಸ್  ಕರ್ತವ್ಯದಲ್ಲಿರುವಾಗ ಕುಂದಾಪುರ ತಾಲೂಕು ಕುಂಭಾಶಿ  ಗ್ರಾಮ ಕೊರವಾಡಿ ಕ್ರಾಸ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಇಸ್ಪಿಟ್  ಜುಗಾರಿ ಆಟ ಆಡುತ್ತಿದ್ದಾರೆಂದು ಸಾರ್ವಜನಿಕರಿಂದ ಮಾಹಿತಿ ಬಂದಂತೆ ಕೂಡಲೇ ದಾಳಿ ಮಾಡಿದಾಗ ಅಲ್ಲಿ ಅಂದರ್ ಬಾಹರ್ ಜುಗಾರಿ ಆಡುತ್ತಿದ್ದ

9 ಜನರಲ್ಲಿ 7 ಜನರು ಅಲ್ಲಿಂದ ಓಡಿ ಹೋಗಿದ್ದು ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದ ಇಬ್ಬರನ್ನು ಸಿಬ್ಬಂದಿಗಳ ಸಹಾಯದಿಂದ  ಹಿಡಿದು ವಿಚಾರಣೆ ನಡೆಸಿದಾಗ ಅವರು 1) ಪ್ರಸಾದ್ ಪೂಜಾರಿ (29), ಅನಂತ ಸದನ, ಅಳಿವೆ ಕೋಟೇಶ್ವರ ಗ್ರಾಮ ಕುಂದಾಪುರ ತಾಲೂಕು, 2) ಮಂಜುನಾಥ ಕಾಂಚನ್ (36) ಸಾಕು ನಿಲಯ ಕೊಮೆ ತೆಕ್ಕಟ್ಟೆ ಗ್ರಾಮ, ಕುಂದಾಪುರ ತಾಲೂಕು ಉಡುಪಿ ಜಿಲ್ಲೆಯವರೆಂದು ತಿಳಿಸಿದ್ದು,  ಸ್ಥಳದಲ್ಲಿದ್ದ  1) ಹಳೆಯ ದಿನಪತ್ರಿಕೆ -1, 2) ಇಸ್ಪೀಟ್ ಎಲೆ  52,  3). ನಗದು ಹಣ ರೂಪಾಯಿ 1080/- ಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ,ಓಡಿ ಹೋದವರ ಹೆಸರು ವಿಳಾಸ ವಿಚಾರಣೆ ಮಾಡಿದಾಗ ಅರುಣ್,  ಪ್ರವೀಣ್, ವಿಶ್ವನಾಥ, ಶಶಿಧರ,  ರೋಹಿತ್, ಭಾಸ್ಕರ ಮತ್ತು ಪಪ್ಪಿ ಎಂಬುದಾಗಿ  ತಿಳಿಸಿರುತ್ತಾರೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

error: No Copying!