ಬೆಳಗಾವಿ: ಜೂನ್ ೨೪ (ಹಾಯ್ ಉಡುಪಿ ನ್ಯೂಸ್) ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕೆಂಬ ವಿಚಾರವನ್ನು ಹಿರಿಯ ಶಾಸಕ ,ಸಚಿವ ಅತ್ಯಂತ ಜವಾಬ್ದಾರಿಯುತ ಸ್ಥಾನದಲ್ಲಿರುವ ಉಮೇಶ್ ಕತ್ತಿಯವರು ಪ್ರಸ್ತಾಪ ಮಾಡಿದ್ದಾರೆ.
ಇದು ಹೊಸತೇನಲ್ಲ.ಒಂದರ್ಥದಲ್ಲಿ ಅವರ ವಿಚಾರ ಸಂಪೂರ್ಣವಾಗಿ ತಪ್ಪೇನೂ ಅಲ್ಲ.ಆದರೆ…ಈ ವಿಚಾರ ಪ್ರಸ್ತಾಪ ಮಾಡುವುದಕ್ಕಿಂತಲೂ ಮುಂಚೆ ತಾವು ಯಾವ ರೀತಿಯ ತಯಾರಿಯನ್ನು ಮಾಡಿಕೊಂಡಿದ್ದೀರಿ ,ಯಾರು ಯಾರು ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ ,ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಅಭಿಪ್ರಾಯ ರೂಪಿಸಿದ್ದೀರಾ ? ಅಥವಾ ಅಂಥ ಯಾವ್ದಾದ್ರೂ ಕಾರ್ಯಕ್ರಮ ಹಾಕಿಕೊಂಡಿದ್ದೀರಾ? ಇದನ್ನು ಮಾಡಿಕೊಂಡು ಮಾತಾಡಿದಾಗ ಮಾತ್ರ ನಿಮ್ಮ ಮಾತಿಗೆ ಗಾಂಭೀರ್ಯತೆ ಬರ್ತದೆ.
ಅದನ್ನು ಬಿಟ್ಟು ಸುಮ್ಮನೆ ಉತ್ತರ ಕರ್ನಾಟಕದ ಮುಖ್ಯಮಂತ್ರಿಯಾಗ್ತೀನಿ , ನನ್ ಮಗ ಮುಖ್ಯಮಂತ್ರಿ ಆಗತಾನ ಅಂತಂದ್ರ ಹೇಗೆ , ಸುಮ್ನೆ ಅದೊಂದು ಸುದ್ದಿ ಆಗ್ತದೆ ಅಷ್ಟೆ . ಕತ್ತಿ ಸಾಹೇಬ್ರೆ ,ನೀವು ಮನಸ್ಸು ಮಾಡಿದ್ದಿದ್ದರೆ……. ಏನೇನೋ ಮಾಡಬಹುದಿತ್ತು ಎಂದು ಉತ್ತರ ಕರ್ನಾಟಕದ ಜನ ಆಡಿಕೊಳ್ಳುತ್ತಿದ್ದಾರೆ.