Spread the love

ಬೆಳಗಾವಿ : ಜೂನ್ ೨೦ (ಹಾಯ್ ಉಡುಪಿ ನ್ಯೂಸ್) ಶಿವಯೋಗದಲ್ಲಿ ಯೋಗ ಆಚರಣೆಯನ್ನು ವೀರಶೈವ ಧರ್ಮ ಬೋಧಿಸಿತು, ಇಷ್ಟಲಿಂಗ ಪೂಜೆಯ ಮೂಲಕ ಶಿವಯೋಗ ಮತ್ತು ಅಷ್ಟಾಂಗ ಯೋಗಗಳ ಮೂಲಕ ಸಂಪೂರ್ಣ ಆರೋಗ್ಯ ಮತ್ತು ಮಾನಸಿಕ ಶಾಂತಿಯನ್ನು ಪ್ರಾಪ್ತಗೊಳಿಸುವ ಮಾರ್ಗವನ್ನು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದಾರೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ನುಡಿದರು.

ಅವರಿಂದು ಬೆಳಗಾವಿಯ ಹುಕ್ಕೇರಿ ಹಿರೇಮಠದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಯೋಗ ತರಬೇತಿ ಶಿಬಿರದಲ್ಲಿ ಆಶೀರ್ವಚನ ನೀಡುತ್ತಿದ್ದರು .
ಭಾರತದಲ್ಲಿ ಧರ್ಮ, ಸಂಸ್ಕೃತಿ, ಪರಂಪರೆ ಇವುಗಳಿಗೆ ಮಹತ್ವದ ಸ್ಥಾನ ನೀಡಲಾಗಿದೆ ಋಷಿಗಳು, ಮುನಿಗಳು, ಆಚಾರ್ಯರು ,ಸಂತರು, ಶ್ರೇಷ್ಠರು ಬಾಳಿ ಬದುಕಿದ ಈ ನಾಡಿನಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಸುಖಿ ಜೀವನ ನಡೆಸಬೇಕು ಎನ್ನುವ ದೃಷ್ಟಿಯಿಂದ ಅಧ್ಯಾತ್ಮದಲ್ಲಿಯೇ ಯೋಗದ ಬೋಧನೆಯನ್ನು ಮಾಡಲಾಗಿದೆ .
ಶ್ರಿ.ಜಗದ್ಗುರು ರೇಣುಕಾಚಾರ್ಯರ ಬೋಧನೆಯಂತೆ ಇಷ್ಟಲಿಂಗ ಪೂಜೆಯಲ್ಲಿಯೇ ಯೋಗವಿದೆ , ಶಿವಯೋಗದಲ್ಲಿಯೇ ಯೋಗವಿದೆ , ಅಷ್ಟಾಂಗ  ಯೋಗ ಸಾಧನೆಯಿಂದ ದೈಹಿಕ ಆರೋಗ್ಯ ಮತ್ತು ಮಾನಸಿಕ ಶಾಂತಿ ಸಾಧ್ಯ , ಎಲ್ಲ ಸಂಪತ್ತುಗಳಿಗಿಂತ ಆರೋಗ್ಯ ಸಂಪತ್ತು ಬಹಳ ದೊಡ್ಡದು ,ಧನ ಸಂಪತ್ತಿಗಾಗಿ ಆರೋಗ್ಯ ಸಂಪತ್ತನ್ನು ನಿರ್ಲಕ್ಷಿಸಲಾಗುತ್ತಿದೆ ,ನಂತರ ಆರೋಗ್ಯಕ್ಕಾಗಿ ಗಳಿಸಿದ ಎಲ್ಲ ಸಂಪತ್ತನ್ನು ವ್ಯಯಿಸಲಾಗುತ್ತಿದೆ ,ಇಂದಿನ ವೈಚಾರಿಕ ಯುಗದಲ್ಲಿ ಯೋಗವನ್ನು ನಿರ್ಲಕ್ಷಿಸಲಾಗುತ್ತಿದೆ ,ಯೋಗ ಆಚರಣೆಯಿಂದ ಮಾತ್ರ ಆರೋಗ್ಯ ಮತ್ತು ಮಾನಸಿಕ ಶಾಂತಿ ಸಾಧ್ಯ ಅದಕ್ಕೆಂದೇ ಎಲ್ಲರಿಗೂ ಸಂಪೂರ್ಣ ಆರೋಗ್ಯ ಲಭ್ಯವಾಗಲಿ ಎಂದು ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಇದನ್ನು ಜಾರಿಗೆ ತರುತ್ತಿರುವ ಪ್ರಧಾನಿ ನರೇಂದ್ರ ಮೋದಿ ಯೋಗಕ್ಕೆ ವಿಶೇಷ ಮಹತ್ವ ನೀಡಿದರು ,ಯೋಗಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ದೊರೆಯುವಂತೆ ಮಾಡಿದರು,ಇಂದು ವಿದೇಶಗಳಲ್ಲಿಯೂ ಸಹ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ , ಅವರೊಬ್ಬ ರಾಜಕಾರಣಿ ಮಾತ್ರ ಅಲ್ಲ ಅಧ್ಯಾತ್ಮ ಸಾಧಕ ಮತ್ತು ಸಂತ ಶ್ರೇಷ್ಠ ಎಂದು ಬಣ್ಣಿಸಿದ ಜಗದ್ಗುರುಗಳು ಪ್ರತಿಯೊಬ್ಬರೂ ತಮ್ಮ ಆರೋಗ್ಯಕ್ಕಾಗಿ ಕುಟುಂಬದ ಸುಖಿ ಜೀವನಕ್ಕಾಗಿ ತಮ್ಮ ದೈನಂದಿನ ಬದುಕಿನಲ್ಲಿ ಯೋಗ ಸಾಧನೆಗಾಗಿಯೇ ಸಮಯವನ್ನು ಮೀಸಲಿಡಬೇಕು ಎಂದು ಕರೆ ನೀಡಿದರು .
ಕಾರ್ಯಕ್ರಮದಲ್ಲಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಜಿಯವರು ಮಾತನಾಡಿ ಯೋಗದ ಮಹತ್ವವನ್ನು ವಿವರಿಸಿದರು ,ಹುಕ್ಕೇರಿ ಹಿರೇಮಠಕ್ಕೆ ಭೇಟಿ ನೀಡಿದ್ದ ಬಾಬಾ ರಾಮದೇವ್ ಅವರು ತಮ್ಮ ಜೀವನದಲ್ಲಿಯೇ ಏಕೈಕ ಪ್ರಶಸ್ತಿ ” ರೇಣುಕ ಶ್ರೀ” ಪ್ರಶಸ್ತಿ ಸ್ವೀಕರಿಸಿದ್ದ ಕ್ಷಣವನ್ನು ನೆನಪಿಸಿಕೊಂಡರು.
ಯೋಗ ಶಿಬಿರದಲ್ಲಿ ಭಾಗವಹಿಸಿದ್ದ ಶಿಬಿರಾರ್ಥಿಗಳಿಗೆ ಉಚಿತ ರುದ್ರಾಕ್ಷಿ ಮತ್ತು ಮಾಸ್ಕ್ ಗಳನ್ನು ವಿತರಿಸಲಾಯಿತು .ಬೈಲಹೊಂಗಲ ಆರಾದ್ರಿಮಠದ ಡಾ ಮಹಾಂತೇಶ ಶಾಸ್ತ್ತ್ರಿಗಳು ,ಶ್ರೀ .ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ , ಡಾ ಪದ್ಮನಾಭ ದರಬಾರೆ, ಅಮೋಘ ಜೈನ್ ,ಶ್ರೀ ರೇಣುಕ ಗಡದೇಶ್ವರ ದೇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು .

error: No Copying!