Spread the love

ಉಡುಪಿ: ಜೂನ್ ೧೯(ಹಾಯ್ ಉಡುಪಿ ನ್ಯೂಸ್) ಉಡುಪಿಯ ಬನ್ನಂಜೆಯ ಶೈಲೇಶ್ ಅವರು ರಕ್ತದ ಕ್ಯಾನ್ಸರ್ ಪೀಡಿತರಾಗಿದ್ದು ಇವರ ಹೆಚ್ಚಿನ ವೈಧ್ಯಕೀಯ ಚಿಕಿತ್ಸೆಗಾಗಿ ಬನ್ನಂಜೆ ಯ ಲಕ್ಷ್ಮೀ ನಾರಾಯಣ ಚೆಂಡೆ ವಾದ್ಯ ಬಳಗದ ಸಹಯೋಗ ದೊಂದಿಗೆ ವಾಸುದೇವ ಬನ್ನಂಜೆ ಇವರ ನೇತೃತ್ವದಲ್ಲಿ ಕಡಿಯಾಳಿ ಮಹೀಷಮರ್ದಿನಿ ದೇವಸ್ಥಾನದಲ್ಲಿ ನಡೆದ ಬ್ರಹ್ಮಕಲಶೋತ್ಸವ
ಸುಸಂದರ್ಭದಲ್ಲಿ ಸಹ್ರದಯವಂತ ದಾನಿಗಳಿಂದ ಪಡೆದ ಹಣವನ್ನು
ಕಚ್ಚೂರು ಮಾಲ್ತಿದೇವಿ ಹಾಗೂ ಬಬ್ಬು ಸ್ವಾಮಿ ಮೂಲ ಕ್ಷೇತ್ರ ಧರ್ಮಧರ್ಶಿಗಳಾದ ಗೋಕುಲದಾಸ್ ಬಾರ್ಕೂರು ಹಾಗೂ ಕಡಿಯಾಳಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ
ಪ್ರಧಾನ ಕಾರ್ಯದರ್ಶಿಗಳಾದ ರಾಘವೇಂದ್ರ ಕಿಣಿ ಯವರು ಶೈಲೇಶ್ ಅವರಿಗೆ ಹಣವನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾಜಿ ನಗರ ಸಭಾ ಸದಸ್ಯ ಹರೀಶ್ ರಾಂ ಬನ್ನಂಜೆ,ಆನಂದ ಶಿರಿಬೀಡು , ತಂಡದ ಸದಸ್ಯರು ಊರಿನ ಸಮಸ್ತ ರು ಉಪಸ್ಥಿತರಿದ್ದರು.

error: No Copying!