ಉಡುಪಿ: ದಿನಾಂಕ:26-11-2026(ಹಾಯ್ ಉಡುಪಿ ನ್ಯೂಸ್) ನಗರದ ಬನ್ನಂಜೆ ಕಾಮತ್ ಬಿಲ್ಡಿಂಗ್ನ ಎದುರಿನ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಪಲ್ಸರ್ ಬೈಕ್ವೊಂದು ಕಳವಾದ ಘಟನೆ ವರದಿಯಾಗಿದೆ.
ಬನ್ನಂಜೆಯ ಕಾಮತ್ ಬಿಲ್ಡಿಂಗ್ನಲ್ಲಿ ವಾಸವಾಗಿರುವ ಡುಂಗೂರು ರಾಮ್ (45) ಎಂಬವರು ತಮ್ಮ KA-20 EW-1615 ನೋಂದಣಿ ಸಂಖ್ಯೆಯ ಪಲ್ಸರ್ ಬೈಕನ್ನು ನ.23ರಂದು ರಾತ್ರಿ ಬ್ರಹ್ಮಗಿರಿಯಲ್ಲಿ ಕೆಲಸ ಮುಗಿಸಿ ಬಂದು ರಾತ್ರಿ ಸುಮಾರು 9:30ಕ್ಕೆ ಕಾಮತ್ ಬಿಲ್ಡಿಂಗ್ ಎದುರಿನ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದರು.
ಮರುದಿನ ನ.24ರಂದು ಬೆಳಿಗ್ಗೆ 7 ಗಂಟೆಗೆ ಬಂದು ನೋಡಿದಾಗ ಬೈಕ್ ನಿಲ್ಲಿಸಿದ್ದ ಸ್ಥಳದಲ್ಲಿ ಕಾಣೆಯಾಗಿತ್ತು. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಾಡಿದರೂ ಬೈಕ್ ಪತ್ತೆಯಾಗಿಲ್ಲ. ನ.23ರ ರಾತ್ರಿ 9:30ರಿಂದ ನ.24ರ ಬೆಳಿಗ್ಗೆ 7 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಬೈಕನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಕಳವಾದ ಬೈಕಿನ ಅಂದಾಜು ಮೌಲ್ಯ 50 ಸಾವಿರ ರೂಪಾಯಿ ಎಂದು ತಿಳಿದುಬಂದಿದೆ. ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 157/2026, ಕಲಂ 303(2) BNS ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
