ಶಿರ್ವ: ದಿನಾಂಕ 25/11/2026 (ಹಾಯ್ ಉಡುಪಿ ನ್ಯೂಸ್) ಹಣದ ಸಹಾಯ ಕೇಳುವ ನೆಪದಲ್ಲಿ ಪರಿಚಿತ ವ್ಯಕ್ತಿ ಯೋರ್ವ ಚಿನ್ನಾ ಭರಣ ದೋಚಿದ ಘಟನೆ ಕುಂಜಾರು ಗಿರಿ ದುರ್ಗಾ ದೇವಿ ದೇವಸ್ಥಾನದ ದೀಪೋತ್ಸವ ಕಾರ್ಯಕ್ರಮದಲ್ಲಿ ನಡೆದಿದೆ.
ಬೆಳ್ಳೆ ಗ್ರಾಮದ ಪಡುಬೆಳ್ಳೆ ಕುಂಜಾರುಗಿರಿ ನಿವಾಸಿ ಬಿ ರಾಜಮೂರ್ತಿ ಭಟ್, (68) ಎಂಬವರು ದಿನಾಂಕ:24-11-2026 ರಂದು ಕುರ್ಕಾಲು ಗ್ರಾಮದ ಕುಂಜಾರುಗಿರಿ ದುರ್ಗಾದೇವಿ ದೇವಸ್ಥಾನದಲ್ಲಿ ದೀಪೋತ್ಸವ ಕಾರ್ಯಕ್ರಮಕ್ಕೆ ಹೋಗಿದ್ದು, ಅಲ್ಲಿ ರಾಜಮೂರ್ತಿ ಭಟ್ ರವರ ಪರಿಚಯದ ಆಪಾದಿತನು ಸಹ ಇದ್ದು, ಆಪಾದಿತನು ರಾತ್ರಿ 8:30 ಗಂಟೆ ಸುಮಾರಿಗೆ ರಾಜ ಮೂರ್ತಿ ರವರ ಬಳಿ ಬಂದು, ನಿಮ್ಮ ಬಳಿ ಸ್ವಲ್ಪ ಮಾತನಾಡಲು ಇದೆ ಎಂದು ಹೇಳಿ, ಅವರನ್ನು ದೇವಸ್ಥಾನದಿಂದ ಹೊರಗೆ ಕರೆದುಕೊಂಡು ಹೋಗಿದ್ದಾನೆ.
ಆತನ ಕಾರಿನಲ್ಲಿ ಕುಳ್ಳಿರಿಸಿ ರಾಜಮೂರ್ತಿ ರವರ ಬಳಿ ತಾನು ಸುಮಾರು 60 ಎಕರೆ ಜಾಗದಲ್ಲಿ ಭತ್ತದ ಬೇಸಾಯ ಮಾಡಿಕೊಂಡಿದ್ದು, ಇದನ್ನು ಸುಮಾರು 200 ಎಕರೆಗೆ ವಿಸ್ತರಿಸುವ ಸಲುವಾಗಿ 25 ಲಕ್ಷದಷ್ಠು ಹಣದ ಅವಶ್ಯಕತೆ ಇದೆ, ಸಹಾಯ ಮಾಡುವಂತೆ ತಿಳಿಸಿರುತ್ತಾನೆ. ಇದಕ್ಕೆ ರಾಜ ಮೂರ್ತಿ ರವರು ಒಪ್ಪದೇ ಇದ್ದಾಗ, ರಾಜ ಮೂರ್ತಿ ರವರ ಕುತ್ತಿಗೆಯಲ್ಲಿದ್ದ ಚಿನ್ನದ ಸರಗಳನ್ನು ದೋಚುವ ಉದ್ದೇಶದಿಂದ ಕಾರಿನಲ್ಲಿ ಸುತ್ತಿಗೆಯಿಂದ ಹಲ್ಲೆ ಮಾಡಿ, ಗಂಭೀರ ಗಾಯಗೊಳಿಸಿದ್ದು, ರಾಜ ಮೂರ್ತಿ ರವರು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಅವರನ್ನು ಬೆನ್ನಟ್ಟಿ ದೂಡಿ ಸುಮಾರು 20 ಗ್ರಾಂ ತೂಕದ ಚಿನ್ನದ ಸರ ಮತ್ತು 28 ಗ್ರಾಂ ತೂಕದ ತುಳಸಿ ಮಣಿಗಳಿರುವ ಚಿನ್ನದ ಸರವನ್ನು ಕಿತ್ತು, ಕಾರು ಸಮೇತ ಪರಾರಿಯಾಗಿರುತ್ತಾನೆ.
ಆಪಾದಿತನು ದೋಚಿದ ಚಿನ್ನದ ಅಂದಾಜು ಮೌಲ್ಯ 4,50,000/- ಆಗಿರುತ್ತದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ:97/2026 ಕಲಂ: 311, 309(6), 118(2) BNS 2023 ರಂತೆ ಪ್ರಕರಣ ದಾಖಲಾಗಿದೆ.
