ಅಂದು ಗೋವಿಂದ ಕಾರಜೋಳ ! ಈಗ ಪ್ರಕಾಶ್ ಹುಕ್ಕೇರಿ !!
ಸಚಿವ ಗೋವಿಂದ ಕಾರಜೋಳ ಅವರು ಪ್ರಕಾಶ್ ಹುಕ್ಕೇರಿ ಅವರನ್ನು ಟೀಕಿಸುವ ಭರದಲ್ಲಿ ಮುದಿ ಎತ್ತು ಅಂದರು ,
ಇನ್ಯಾರೋ ಎಸ್ ಎಸ್ ಎಲ್ ಸಿ ಫೇಲ್ ಅಂದರು,ಆದರೆ ಇದೇ ಪ್ರಕಾಶ್ ಹುಕ್ಕೇರಿ zp ಮೆಂಬರ್ ಅಗಿ, ಎಂಎಲ್ ಸಿಯಾಗಿ , ಚೀಫ್ ವ್ಹಿಪ್ ಆಗಿ ,ಮಿನಿಸ್ಟರ್ ಆಗಿ, ಎಂಪಿ ಆಗಿ ಎಲ್ಲಾ ಎಲ್ಲಾ ಕಡೆ ಸೈ ಅನಿಸಿಕೊಂಡವರು ಅನ್ನೋದನ್ನ ಇವ್ರೆಲ್ಲ ಮರೆತುಬಿಟ್ಟರು.
ಸಿಟ್ಟಿಗೆದ್ದ ಮುದಿ ಎತ್ತು ,1ಕೈ ನೋಡೇ ಬಿಡೋಣ ಅಂತ ಮೀಸೆ ಮೇಲೆ ಕೈಹಾಕಿ ಬಿಟ್ಟು ಹರೆಯದ ಹೋರಿಯನ್ನ ಎತ್ತಿ ಎತ್ತಿ ಹಾಕಿದ್ದನ್ನು ನೋಡಿದರೆ……
ಅದೇ ಪ್ರಕಾಶ್ ಹುಕ್ಕೇರಿ ಗೆದ್ದ ಹುರುಪಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರನ್ನು ಹಲ್ಲು ಮುರಿಯುವುದಾಗಿ ಬೆದರಿಸಿದ್ದು ಕೇಳಿಬಂತು , ಹಲ್ಲು ಮುರಿಸಿಕೊಳ್ಳುವು ವಂಥದ್ದನ್ನು ಆ ಅಧಿಕಾರಿ ಏನ್ ಮಾಡಿದ್ರು ? ಏನೇ ಆದ್ರೂ ಪ್ರಕಾಶ್ ಹುಕ್ಕೇರಿ ಅಂಥವರು ಬಾಯಲ್ಲಿ ಇಂಥ ಮಾತು ಬರಬಾರದಿತ್ತು .
ಗೋವಿಂದ್ ಕಾರಜೋಳ ಮತ್ತು ಪ್ರಕಾಶ್ ಹುಕ್ಕೇರಿ ಇಬ್ಬರು ಹಿರಿಯರು, ಅನುಭವಸ್ಥರು , ಮಾಗಿದವರು ಇಬ್ಬರೂ ಸಂಭಾವಿತ ರಾಜಕಾರಣಿಗಳ ಪಟ್ಟಿಯಲ್ಲಿ ಬರ್ತಾರೆ ,ಇಬ್ಬರೂ ಯಾವತ್ತೂ ತೋಳಬಲ ಬಳಸಿದ್ದು ಉದಾಹರಣೆಯಲ್ಲಿ ಇಲ್ಲ .
ಆದರೂ ಇಬ್ಬರೂ ನಡೆದುಕೊಂಡ ರೀತಿ ಬಳಸಿದ ಭಾಷೆ ಇಬ್ಬರಿಗೂ ಶೋಭೆ ತರುವಂಥದ್ದಲ್ಲ ,
ಹಿರಿಯರಾಗಿ ಯಾವ ಮಾದರಿಯಲ್ಲಿ ನೀವು ಕಿರಿಯರಿಗೆ ಏನು ಸಂದೇಶ ನೀಡುತ್ತಾ ಇದ್ದೀರಿ ?