IMG_20261119_194526.png
Spread the love

ಕಾರ್ಕಳ: ದಿನಾಂಕ:19-11-2026(ಹಾಯ್ ಉಡುಪಿ ನ್ಯೂಸ್) ಮನೆಯ ಸಮೀಪವಿರುವ ನೀರು ಸಂಗ್ರಹಿಸುವ ತೋಡಿಗೆ ಆಕಸ್ಮಿಕವಾಗಿ ಬಿದ್ದು 73 ವರ್ಷದ ವೃದ್ಧರೊಬ್ಬರು ಮೃತಪಟ್ಟ ಘಟನೆ ಕಾಂತಾವರ ಗ್ರಾಮದ ಬೇಲಾಡಿ ಹೊಸಗದ್ದೆ ಎಂಬಲ್ಲಿ ನಡೆದಿದೆ.

ಮೃತರನ್ನು ಹೆನ್ರಿ ಡಿಸೋಜ (73) ಎಂದು ದೂರಿನ ಪ್ರಾಥಮಿಕ ವಿವರದಲ್ಲಿ ತಿಳಿಸಲಾಗಿದೆ. ಇವರು ತಮ್ಮ ಪುತ್ರ ವಿನ್ಸೆಂಟ್ ಅವರೊಂದಿಗೆ ಬೇಲಾಡಿ ಗ್ರಾಮದ ಮನೆಯಲ್ಲಿ ವಾಸವಾಗಿದ್ದರು. ಮೃತರ ಮತ್ತೊಬ್ಬ ಪುತ್ರ ಅಲ್ವಿನ್ ಡಿಸೋಜ (48) ಅವರು ಪ್ರಸ್ತುತ ಮಣಿಪಾಲದಲ್ಲಿರುವ ತಮ್ಮ ಪತ್ನಿಯ ಮನೆಯಲ್ಲಿ ವಾಸವಾಗಿದ್ದರು.
ನ.18ರಂದು ಸಂಜೆ ಸುಮಾರು 5 ಗಂಟೆಗೆ ವಿನ್ಸೆಂಟ್ ಅವರು ಅಲ್ವಿನ್ ಡಿಸೋಜ ಅವರಿಗೆ ದೂರವಾಣಿ ಕರೆ ಮಾಡಿ, ತಂದೆಯವರು ಮನೆಯ ಸಮೀಪದ ಹೊಸಗದ್ದೆ ಎಂಬಲ್ಲಿ ನೀರು ಸಂಗ್ರಹಿಸುವ ತೋಡಿಗೆ ಬಿದ್ದು ಮೃತಪಟ್ಟಿರುವುದಾಗಿ ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ 65/2026, ಕಲಂ 194 BNSS ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

error: No Copying!