images-10.jpeg
Spread the love

ಉಡುಪಿ: ದಿನಾಂಕ:11-11-2026(ಹಾಯ್ ಉಡುಪಿ ನ್ಯೂಸ್) ಉಡುಪಿ ತಾಲೂಕಿನ 76-ಬಡಗುಬೆಟ್ಟು ಗ್ರಾಮದ ಕುಕ್ಕಿಕಟ್ಟೆ ಇಂದಿರಾನಗರ 6ನೇ ಕ್ರಾಸ್ ನಿವಾಸಿ, ದಸ್ತಾವೇಜು ಬರಹಗಾರ್ತಿಯಾಗಿ ಕೆಲಸ ಮಾಡಿಕೊಂಡಿದ್ದ ಶ್ರೀಮತಿ ಶಾಂತೇರಿ ನಾಯಕ್ (52) ಎಂಬವರು ನಾಪತ್ತೆಯಾಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಂತೇರಿ ನಾಯಕ್ ಅವರು ತಮ್ಮ ಪುತ್ರ ವೈಭವ್ ಬಿ. ನಾಯಕ್ (22) ಅವರೊಂದಿಗೆ ಮನೆಯಲ್ಲಿ ವಾಸವಾಗಿದ್ದರು. ಕೌಟುಂಬಿಕ ಸಮಸ್ಯೆಯ ಹಿನ್ನೆಲೆಯಲ್ಲಿ ಪತಿ ಹಾಗೂ ಮಗಳು ಪ್ರತ್ಯೇಕವಾಗಿ ಬೇರೆ ಕಡೆ ವಾಸವಾಗಿದ್ದರು ಎನ್ನಲಾಗಿದೆ.

ದಿನಾಂಕ 10-11-2026 ರಂದು ಮಧ್ಯಾಹ್ನ ಸುಮಾರು 3:30 ಗಂಟೆಗೆ ಶಾಂತೇರಿ ನಾಯಕ್ ಅವರು ಕುಕ್ಕಿಕಟ್ಟೆ ಇಂದಿರಾನಗರ 6ನೇ ಕ್ರಾಸ್‌ನಲ್ಲಿರುವ ತಮ್ಮ ಮನೆಯಿಂದ ಹೊರಗೆ ಹೋದವರು ಈವರೆಗೂ ಮನೆಗೆ ವಾಪಸಾಗದೆ ನಾಪತ್ತೆಯಾಗಿದ್ದಾರೆ.
ಈ ಕುರಿತು ಪುತ್ರ ವೈಭವ್ ಬಿ. ನಾಯಕ್ ಅವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 151/2026ರ ಅಡಿಯಲ್ಲಿ ಮಹಿಳೆ ಕಾಣೆಯಾದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

error: No Copying!