file_00000000a8288211bc8d943591e202cc.png
Spread the love

ಮಲ್ಪೆ: ದಿನಾಂಕ:03-11-2026(ಹಾಯ್ ಉಡುಪಿ ನ್ಯೂಸ್) ಮೀನು ವ್ಯವಹಾರದ ಒಡಂಬಡಿಕೆ ಮಾಡಿಕೊಂಡು ಮೀನು ಪಡೆದು ಆ ನಂತರ ಹಣ ನೀಡದೆ ವಂಚನೆ ನಡೆಸಿರುವ ಇಬ್ಬರು ವ್ಯಕ್ತಿಗಳ ವಿರುದ್ಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಉಡುಪಿ ,ಪಡುತೋನ್ಸೆ ಗ್ರಾಮದ ನಿವಾಸಿ ಪ್ರವೀಣ ಪೂಜಾರಿ (44), ಎಂಬವರು ಮೀನುಗಾರಿಕೆ ವ್ಯವಹಾರ ಮಾಡಿಕೊಂಡಿದ್ದು, ಈ ಹಿಂದೆ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ 2ನೇ ಆರೋಪಿ ಇರ್ಷಾದ್ ಎಂಬವನು ಅವನ ಪರಿಚಯದ ಉಳ್ಳಾಲ ನಿವಾಸಿ 1ನೇ ಆರೋಪಿತ ರಫೀಕ್‌ ಯಾನೆ ಅಪ್ಪು ಎಂಬಾತನನ್ನು ಪರಿಚಯಿಸಿ ಮೀನು ವ್ಯವಹಾರ ಮಾಡುವಂತೆ ತಿಳಿಸಿದ್ದಾನೆ .

ಅದರಂತೆ ಪ್ರವೀಣ್ ಪೂಜಾರಿ ಯವರು 2026ನೇ ಜನವರಿಯಿಂದ ಮಾರ್ಚ್ ತಿಂಗಳವರೆಗೆ 1ನೇ ಆರೋಪಿಗೆ ಮೀನು ನೀಡಿದ್ದು, ಆರೋಪಿಯು ವ್ಯವಹಾರದ ಸಮಯದಲ್ಲಿ ಸ್ವಲ್ಪ ಸ್ವಲ್ಪ ಹಣ ಪಾವತಿಸಿ, ಒಟ್ಟು ರೂಪಾಯಿ 4,40,000/- ಹಣವನ್ನು ಬಾಕಿ ಉಳಿಸಿಕೊಂಡಿದ್ದು, ಮೀನು ಸಾಗಾಟಕ್ಕಾಗಿ ಪಡೆದುಕೊಂಡಿದ್ದ 240 ಮೀನು ಬಾಕ್ಸ್‌ಗಳನ್ನು ವಾಪಸ್ ನೀಡಿರುವುದಿಲ್ಲ, ಪ್ರವೀಣ್ ಪೂಜಾರಿ ಯವರು ಕರೆ ಮಾಡಿದರೂ ಕರೆ ಸ್ವೀಕರಿಸದೆ ಪ್ರವೀಣ್ ಪೂಜಾರಿ ಯವರಿಗೆ ಕೊಡಬೇಕಾದ ಹಣ 4,40,000/- ಮತ್ತು 240 ಮೀನು ಬಾಕ್ಸ್‌ಗಳನ್ನು ವಾಪಸ್ಸು ನೀಡದೇ ವಂಚನೆ ಹಾಗೂ ನಂಬಿಕೆ ದ್ರೋಹ ಎಸಗಿದ್ದಾರೆ ಎಂದು  ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದಾರೆ.

ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 120/2026 ಕಲಂ: 316,318 BNS ರಂತೆ ಪ್ರಕರಣ ದಾಖಲಾಗಿದೆ.

error: No Copying!