ಕೋಟ:: ದಿನಾಂಕ:02-11-2026(ಹಾಯ್ ಉಡುಪಿ ನ್ಯೂಸ್) ಹಾರ್ಯಾಡಿ ಹೆಸ್ಕತ್ತೂರು ಗ್ರಾಮದ ನಿವಾಸಿ ದಿನೇಶ್ ಆಚಾರ್ ಎಂಬವರು ತನ್ನ ಭಾವನ ಮನೆಗೆ ತೆರಳಿದ್ದಾಗ 8 ಜನರ ತಂಡವೊಂದು ತಡೆದು ಗಂಭೀರ ಹಲ್ಲೆ ನಡೆಸಿರುವ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಹಾರ್ಯಾಡಿ ಹೆಸ್ಕತ್ತೂರು ಗ್ರಾಮದ ನಿವಾಸಿ ದಿನೇಶ್ ಆಚಾರ್ (40)ಎಂಬವರು ದಿನಾಂಕ:01.11.2026 ರಂದು 7.00 ಗಂಟೆಗೆ ಭಾವನಾದ ಚಂದ್ರ ಆಚಾರ್ ಮನೆಯಾದ ಪಡುಮುಂಡು ತಾಡಿನ ಹಕ್ಲು ಗೆ ತಾಯಿಯನ್ನು ಕರೆದುಕೊಂಡು ಬಂದಾಗ ಮನೆಯ ಅಂಗಳದಲ್ಲಿ ಆರೋಪಿಗಳಾದ ಗಣೇಶ ,ಮಹೇಶ .ಕೃಷ್ಣ, ರಾಜು ದಿನೇಶ ಮತ್ತು ಇತರ 3 ಜನರು ಅಡ್ಡಗಟ್ಟಿ ಗಲಾಟೆ ಮಾಡಿ ವಾಹನವನ್ನು ನಿಲ್ಲಿಸಿ ,ವಾಹನದಿಂದ ಇಳಿದಾಗ ಗಣೇಶ ಎಂಬವನು ಏಕಾಏಕಿ ಕೈಯನ್ನು ಹಿಂದೆ ತಿರುಗಿಸಿ ಹಿಡಿದುಕೊಂಡು ,ಮಹೇಶ,ಕೃಷ್ಣ,ರಾಜು,ದಿನೇಶ ಇನ್ನಿತರರು ಹಿಗ್ಗಾಮುಗ್ಗಾ ತುಳಿದು ಕೈಯಿಂದ ಹೊಡೆದು ಕುತ್ತಿಗೆ ಒತ್ತಿ ಹಿಡಿದು ಮಾರಣಾಂತಿಕವಾಗಿ ಹೊಡೆದಿರುತ್ತಾರೆ.
ದಿನೇಶ್ ಆಚಾರ್ ರನ್ನು ಎಳೆದಾಡಿ ಹೊಡೆಯುವಾಗ ಕನ್ನಡಕ ಒಡೆದಿದೆ ,ಕುತ್ತಿಗೆಯಲ್ಲಿರುವ 10 ಗ್ರಾಂ ಚಿನ್ನದ ಸರ ಗಲಾಟೆಯ ಸಂದರ್ಭದಲ್ಲಿ ಅಲ್ಲೆ ಬಿದ್ದು ಹೋಗಿರುತ್ತದೆ,ಏಕೆ ಹೊಡೆಯುತ್ತಿದ್ದೀರಿ ಎಂದು ಕೇಳಿದ್ದಕ್ಕೆ ಈ ಗಲಾಟೆಗೆ ನೀನೇ ಕಾರಣ ಎಂದು ಎಲ್ಲರೂ ಸೇರಿ ಹೊಡೆದಿದ್ದು ,ಗಣೇಶ ಎನ್ನುವವನು ನಾನು ತುಂಬಾ ಗಲಾಟೆ ಕೇಸಿನಲ್ಲಿ ಜಯಶಾಲಿಯಾಗಿ ಬಂದವ ನಾನು ನಿಮ್ಮನ್ನೆಲ್ಲ ಕೊಲೆ ಮಾಡಿ ಕೇಸಿಲ್ಲದ ಹಾಗೆ ಮಾಡುತ್ತೇನೆ ಎಂದು ಹೇಳಿ, ದಿನೇಶ್ ಆಚಾರ್ ರ ತಾಯಿ ದಿನೇಶ್ ಆಚಾರ್ ರಿಗೂ ಹಾಗೂ ಮಗಳಿಗೆ ಹೊಡೆಯಬೇಡಿ ಎಂದು ಎಲ್ಲರ ಕಾಲಿಗೂ ಬಿದ್ದು ಅಂಗಲಾಚಿದರೂ ಕೂಡ ಬಿಡದೇ ಹೊಡೆದು ದಿನೇಶ್ ಆಚಾರ್ ಗೆ ಕೈಯಿಂದ ಕೆನ್ನೆಗೆ ,ಹೊಟ್ಟೆಗೆ ,ಎದೆಗೆ, ಭುಜಕ್ಕೆ ಬಡಿದು ಕಾಲಿನಿಂದ ಹೊಟ್ಟೆಗೆ ಕಾಲಿಗೆ ಬೆನ್ನಿಗೆ ಒದ್ದಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ:172/2026 ಕಲಂ: 126(2),115(2),352,351(2) ಜೊತೆಗೆ 190 ಬಿಎನ್ಎಸ್ ರಂತೆ ಪ್ರಕರಣ ದಾಖಲಾಗಿದೆ.
