file_00000000a0988207b908551b171435dd.png
Spread the love

ಮಣಿಪಾಲ: ದಿನಾಂಕ:28-10-2026(ಹಾಯ್ ಉಡುಪಿ ನ್ಯೂಸ್) ಡಿ.ಸಿ ಕಚೇರಿ ರಸ್ತೆಯಲ್ಲಿರುವ ಹೊಟೇಲ್ ಒಂದರಲ್ಲಿ ತಡರಾತ್ರಿ ಅಕ್ರಮ ವ್ಯಾಪಾರ ನಡೆಸುತ್ತಿದ್ದಲ್ಲಿಗೆ ಮಣಿಪಾಲ ಪೊಲೀಸರು ದಾಳಿ ನಡೆಸಿ ಹೋಟೆಲ್ ಗೆ ಬೀಗ ಜಡಿದಿದ್ದಾರೆ.

ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಶಂಭುಲಿಂಗಯ್ಯ ಎಂ.ಇ ಅವರು ದಿನಾಂಕ:27-10-2026 ರಂದು ಠಾಣಾ ಸರಹದ್ದಿನಲ್ಲಿ ಅಪರಾಧ ಪತ್ತೆ ಬಗ್ಗೆ ವಿಶೇಷ ರೌಂಡ್ಸ್‌ ಕರ್ತವ್ಯದಲ್ಲಿ ಇರುವಾಗ ದಿನಾಂಕ:27/10/2026 ರಂದು 01:15 ಗಂಟೆಗೆ ಶಿವಳ್ಳಿ ಗ್ರಾಮದ ಮಣಿಪಾಲ ಡಿ.ಸಿ ಕಛೇರಿ ರಸ್ತೆಯಲ್ಲಿರುವ HOT N SPICY ಎಂಬ ಹೆಸರಿನ ಹೋಟೆಲಿನವರು ಅವಧಿ ಮೀರಿ ಹೋಟೆಲ್‌ ನಲ್ಲಿ ಗಿರಾಕಿಗಳಿಗೆ ಸರ್ವಿಸ್‌ ಮತ್ತು ಪಾರ್ಸೆಲ್‌ ನೀಡುತ್ತಿದ್ದು ಇದರಿಂದ ಉಡುಪಿಯ ವಿವಿಧ ಪರಿಸರದಿಂದ ಸಾರ್ವಜನಿಕರು ಇಲ್ಲಿ ಬಂದು ಈ ಸ್ಥಳದಲ್ಲಿ ಜಮಾಯಿಸುವುದರಿಂದ ಅಲ್ಲಿಯ ಪರಿಸರದಲ್ಲಿ ವಾಸವಿರುವ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗುತ್ತಿದೆ ಎಂಬುವುದಾಗಿ ಬಾತ್ಮಿದಾರರಿಂದ ಮಾಹಿತಿ ಬಂದ ಮೇರೆಗೆ ರಾತ್ರಿ ರೌಂಡ್ಸ್‌ ಕರ್ತವ್ಯದಲ್ಲಿ ಇದ್ದ ಸಿಬ್ಬಂದಿಗಳೊಂದಿಗೆ ಮಾಹಿತಿ ಬಂದ ಸ್ಥಳಕ್ಕೆ ತೆರಳಿದ್ದಾರೆ.

ಪೊಲೀಸರು ಸ್ಥಳಕ್ಕೆ ತೆರಳಿದಾಗ ಹೋಟೆಲ್‌ ನ ಬಾಗಿಲು ಅರೆ ತೆರೆದಿದ್ದು ಹೋಟೆಲಿನ ಒಳಗೆ ಹೋಗಿ ಪರಿಶೀಲಿಸಿದಾಗ ಅಲ್ಲಿ ಗ್ರಾಹಕರು ಕುಳಿತುಕೊಂಡು ಆಹಾರ ಪಧಾರ್ಥಗಳನ್ನು ಸೇವಿಸುತ್ತಿದ್ದು ಕಂಡು ಬಂದಿದ್ದು ಹೋಟೆಲಿನ ವ್ಯವಸ್ಥಾಪಕರಾದ ಫರ್ಹಾನ್‌ ಮತ್ತು ಜೋಯಲ್‌ ರವರಿಗೆ ರಾತ್ರಿ ಪಾಳಿಯಲ್ಲಿ ಹೋಟೆಲ್‌ ವ್ಯಾಪಾರ ನಡೆಸುವ ಬಗ್ಗೆ ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಿದಾಗ ಅವರು ತಮ್ಮ ಬಳಿ ಯಾವುದೇ ಪರವಾನಗಿ ಇರುವುದಿಲ್ಲ ಎಂಬುದಾಗಿ ತಿಳಿಸಿದ್ದು ನಂತರ ವೀಡಿಯೋ ಮಾಡಿ, ಅಲ್ಲಿದ್ದ ಸಾಕ್ಷಿದಾರರ ಸಮಕ್ಷಮ ಮಹಜರು ಕ್ರಮ ಜರುಗಿಸಿದ್ದು  HOT N SPICY ಹೋಟೆಲ್‌ ವಿರುದ್ದ ಈ ಹಿಂದೆ ಠಾಣಾ ಅ.ಕ್ರ 81/2026 ರಂತೆ ಪ್ರಕರಣ ದಾಖಲಾಗಿದ್ದು ಹಾಗೂ ಮಾಲಿಕರಿಗೆ ಈಗಾಗಲೇ ಹಲವಾರು ಬಾರಿ ಮೌಖಿಕವಾಗಿ ಹೊಟೇಲನ್ನು ಸರಿಯಾದ ಸಮಯಕ್ಕೆ ಬಂದ್ ಮಾಡಲು ತಿಳಿಸಿದ್ದರೂ ಸಹ ಹೋಟೇಲ್ ಮಾಲಿಕರು ಯಾವುದೇ ಪರವಾನಿಗೆ ಪಡೆಯದೇ ಅವಧಿ ಮೀರಿ ಹೋಟೇಲನ್ನು ಕಾರ್ಯಾಚರಣೆ ಮಾಡಿರುವುದರಿಂದ ಸಾರ್ವಜನಿಕರ ನೆಮ್ಮದಿಗೆ ಭಂಗವುಂಟು ಮಾಡಿ, ಸಾರ್ವಜನಿಕ ಉಪದ್ರವಕ್ಕೆ ಕಾರಣರಾಗಿರುತ್ತಾರೆ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ:178/2026 ಕಲಂ 292, 293 ಜೊತೆಗೆ 3(5)BNS ರಂತೆ ಪ್ರಕರಣ ದಾಖಲಾಗಿದೆ.

error: No Copying!