IMG_20261025_162631.jpg
Spread the love

ಬೈಂದೂರು: ದಿನಾಂಕ:25-10-2026(ಹಾಯ್ ಉಡುಪಿ ನ್ಯೂಸ್) ಮಂಗಳೂರಿನಿಂದ ಮಡ್ಗಾಂವ್ ಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಗೋವಾ ರಾಜ್ಯದ ನಿವಾಸಿಯೋರ್ವರ ಮೊಬೈಲನ್ನು ಯಾರೋ ಕಳ್ಳತನ ನಡೆಸಿ ಮೊಬೈಲ್ ನಿಂದ ಹಣ ವರ್ಗಾವಣೆ ನಡೆಸಿದ್ದಾರೆ ಎಂದು ರೂಬೆನ್ ಫೆರ್ನಾಂಡಿಸ್ ಎಂಬವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಗೋವಾ ರಾಜ್ಯದ ಕಾಂನ್ಕೋಲಿಮ್ ಸಾಲ್ಸೆಟ್ ನಿವಾಸಿ ರೂಬೆನ್ ಫೆರ್ನಾಂಡಿಸ್ (25)   ಎಂಬವರು ದಿನಾಂಕ: 02/08/2026 ರಂದು MAJN ADI ಟ್ರೇನ್‌ ನಂ 09423 (PNR: 4142020434) ರೈಲಿ ನಲ್ಲಿ ಕೋಚ್‌ ನಂ S3 Berth No: 70 ರಲ್ಲಿ ಮಂಗಳೂರಿನಿಂದ ಮಡಗಾಂವ ರೈಲ್ವೆ ಸ್ಟೇಷನ್‌  ಗೆ ಪ್ರಯಾಣಿಸುತ್ತಿರುವಾಗ ಬೆಳಗ್ಗಿನ ಜಾವ ಸುಮಾರು 2.00 ಗಂಟೆಗೆ  ಬೈಂದೂರು ರೈಲು ನಿಲ್ದಾಣದಲ್ಲಿ ರೂಬೆನ್ ಫೆರ್ನಾಂಡಿಸ್ ರ ಬಳಿ ಇರಿಸಿಕೊಂಡಿದ್ದ ಮೊಬೈಲ್‌ Motorola G ಅನ್ನು  ರೂಬೆನ್ ಫೆರ್ನಾಂಡಿಸ್ ರು ಪ್ರಯಾಣಿಸುತ್ತಿದ್ದ ಬೋಗಿಯಲ್ಲಿದ್ದ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ.

ಕಳವಾದ ಮೊಬೈಲ್ ನ ಅಂದಾಜು ಮೌಲ್ಯ ರೂ 17000  /- ರೂ ಆಗಿರುತ್ತದೆ. ಅಲ್ಲದೇ ಆಪಾದಿತನು ರೂಬೆನ್ ಫೆರ್ನಾಂಡಿಸ್ ರ ಮೊಬೈಲ್‌ ನ್ನು ಕಳವು ಮಾಡಿ ಕಾನೂನು ಬಾಹಿರವಾಗಿ 19847/- ರೂ ಹಣ UPI ಮೂಲಕ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ಪೋಲೀಸರೀಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಬೈಂದೂರು  ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ: 145/2026 ಕಲಂ  305(c) BNS And IT Act  66 ( C ) &(D) ರಂತೆ ಪ್ರಕರಣ ದಾಖಲಾಗಿದೆ.

error: No Copying!