ಮಣಿಪಾಲ: ದಿನಾಂಕ 22/10/2026 (ಹಾಯ್ ಉಡುಪಿ ನ್ಯೂಸ್) ಲಕ್ಷ್ಮೀಂದ್ರ ನಗರದ ಬಳಿಯ ರಸ್ತೆ ಬದಿಯಲ್ಲಿ ಮನುಷ್ಯನ ತಲೆ ಬುರುಡೆ ಹಾಗೂ ಮೂಳೆಗಳು ಬಿದ್ದಿರುವ ಬಗ್ಗೆ ಜೋಯಲ್ ಜೋಸ್ವ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ .
ಉಡುಪಿ ಶಿವಳ್ಳಿ ಗ್ರಾಮದ ನಿವಾಸಿ ಜೋಯಲ್ ಜೋಸ್ವ (26), ಎಂಬವರು ದಿನಾಂಕ : 21-10-2026 ರಂದು ಮಣಿಪಾಲದಿಂದ ಉಡುಪಿ ಕಡೆಗೆ ಮೋಟಾರು ಸೈಕಲಿನಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಸಮಯ ಸಂಜೆ 04:30 ಗಂಟೆಗೆ ಲಕ್ಷ್ಮೀಂದ್ರ ನಗರದ ಬಳಿ ಅನಂತ ಕಲ್ಯಾಣ 3ನೇ ಅಡ್ಡ ರಸ್ತೆಯ ಹತ್ತಿರ ಜನರು ಸೇರಿದ್ದು ಅಲ್ಲಿಗೆ ಜೋಯಲ್ ಜೋಸ್ವ ಅವರು ಹೋಗಿ ನೋಡಿದಾಗ ಮನುಷ್ಯನ ತಲೆಬುರುಡೆ ಹಾಗೂ ಮೂಳೆಯಂತೆ ಕಾಣುವ ವಸ್ತುಗಳು ಇದ್ದವು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕ್ರಮಾಂಕ 53/2026 ಕಲಂ:194 BNSS ರಂತೆ ಪ್ರಕರಣ ದಾಖಲಾಗಿದೆ .
