ಕೋಟ: ದಿನಾಂಕ :15/10/2026 (ಹಾಯ್ ಉಡುಪಿ ನ್ಯೂಸ್) ಕೋಟೇಶ್ವರ ಕಡೆಯಿಂದ ಉಡುಪಿ ಕಡೆಗೆ ಪಿಕ್ ಅಪ್ ವಾಹನದಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ನಡೆಸುತ್ತಿದ್ದ ನಾಲ್ವರು ವ್ಯಕ್ತಿ ಗಳನ್ನು ಕೋಟ ಪೊಲೀಸ್ ಠಾಣೆಯ ಪಿಎಸ್ಐಯವರಾದ ಪ್ರವೀಣ ಕುಮಾರ್ ಆರ್ ಅವರು ಬಂಧಿಸಿದ್ದಾರೆ.
ಕೋಟ ಪೊಲೀಸ್ ಠಾಣೆಯ ಪಿ.ಎಸ್.ಐ. ಪ್ರವೀಣ ಕುಮಾರ್ ಆರ್ ರವರಿಗೆ ದಿನಾಂಕ: 13-10-2026ರಂದು ಸಾರ್ವಜನಿಕರೊಬ್ಬರು ಕರೆಮಾಡಿ, ಕೊಟೇಶ್ವರ ಕಡೆಯಿಂದ ಉಡುಪಿ ಕಡೆಗೆ ಒಂದು ಬುಲೇರೋ ಪಿಕ್ಅಪ್ ವಾಹನ ನಂಬ್ರ KA-40-B-8708 ನೇದರಲ್ಲಿ ಅಕ್ರಮವಾಗಿ ಮಾಂಸಮಾಡಿ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಜಾನುವಾರುಗಳನ್ನು ತುಂಬಿಸಿಕೊಂಡು ಸಾಗಾಟ ಮಾಡುತ್ತಿರುವುದಾಗಿ ಖಚಿತ ಮಾಹಿತಿ ನೀಡಿದಂತೆ ಕೂಡಲೇ ಪಿಎಸ್ಐ ಯವರು ಠಾಣೆಯ ಸಿಬ್ಬಂದಿಗಳೊಂದಿಗೆ ತೆಕ್ಕಟ್ಟೆ ಜಂಕ್ಷನ್ ಬಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಸ್ತೆಯಲ್ಲಿ ಕೊಟೇಶ್ವರ ಕಡೆಯಿಂದ ಉಡುಪಿ ಮಂಗಳೂರು ಹೋಗುವ ಎಲ್ಲಾ ವಾಹನಗಳ ತಪಾಸಣೆ ಮಾಡುತ್ತಿರುವಾಗ ರಾತ್ರಿ 9:00 ಗಂಟೆಗೆ ಒಂದು ಬುಲೇರೋ ಪಿಕ್ಅಪ್ ವಾಹನ ನಂಬ್ರ KA-40-B-8708 ನೇ ವಾಹನದ ಚಾಲಕನು ತನ್ನ ವಾಹನವನ್ನು ಪೊಲೀಸರಿಂದ ಸುಮಾರು 50 ಮೀಟರ್ ಹಿಂದೆ ನಿಲ್ಲಿಸಿದ್ದು ಪೊಲೀಸರಿಗೆ ಈ ವಾಹನದ ಮೇಲೆ ಸಂಶಯ ಬಂದಿದ್ದು, ಸಿಬ್ಬಂದಿಗಳೊಂದಿಗೆ ವಾಹನವನ್ನು ತಪಾಸಣೆ ಮಾಡಲು ಹೊರಟಾಗ ವಾಹನದಲ್ಲಿದ್ದ 4 ವ್ಯಕ್ತಿಗಳು ಸಮವಸ್ತ್ರದಲ್ಲಿದ್ದ ಪೊಲೀಸರನ್ನು ನೋಡಿ ಓಡಿ ಹೋಗಲು ಪ್ರಯತ್ನಿಸಿದ್ದು, ಅವರುಗಳನ್ನು ಠಾಣೆಯ ಸಿಬ್ಬಂದಿಗಳ ಸಹಾಯದೊಂದಿಗೆ ಹಿಡಿದು ಪಿಕ್ಅಪ್ ವಾಹನವನ್ನು ಪರಿಶೀಲಿಸಿದಾಗ, ವಾಹನದಲ್ಲಿ 4 ಜನ ಇದ್ದು, ಅವರುಗಳ ಹೆಸರು ವಿಳಾಸ 1) ಪುನಿತ್, (27) ವಾಸ: ಮೋಟಾಲ, ಚಿಕ್ಕಬಳ್ಳಾಪುರ ಜಿಲ್ಲೆ. 2) ಗಣೇಶ (26) ವಾಸ: ಬಾಗೆಪಲ್ಲಿ, ಕೋಲಾರ, 3) ಕೃಷ್ಣಪ್ಪ (40) ವಾಸ: ಚಿಕ್ಕಬಳ್ಳಾಪುರ, 4) ಶ್ರೀನಿವಾಸ, (56) ವಾಸ: ಚಿಕ್ಕಬಳ್ಳಾಪುರ ಜಿಲ್ಲೆ ಎಂಬುದಾಗಿ ತಿಳಿಸಿರುತ್ತಾರೆ.
ಪಿಕ್ ಅಪ್ ವಾಹನದಲ್ಲಿ ಹಿಂಸಾತ್ಮಕ ರೀತಿಯಲ್ಲಿ ಕುತ್ತಿಗೆಗೆ ನೈಲಾನ್ ರೋಪ್ ಹಗ್ಗವನ್ನು ಕಟ್ಟಿ ಅವುಗಳಿಗೆ ಆಹಾರ ಮೇವು ನೀರು ನೀಡದೆ ಮಾಂಸಕ್ಕಾಗಿ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿದ್ದು, 1) ಬುಲೇರೋ ಪಿಕ್ಅಪ್ ವಾಹನ ನಂಬ್ರ KA-40-B-8708 ನೇಯದು ಗೂಡ್ಸ್ ವಾಹನವಾಗಿದ್ದು, ಇದರ ಅಂದಾಜು ಮೌಲ್ಯ ರೂಪಾಯಿ 2,00,000 ಆಗಿದ್ದು, ಅದರ ಓಳಗಡೆ 2) ಕಂಡು ಬಣ್ಣದ ದನ-1, ಇದರ ಅಂದಾಜು ಮೌಲ್ಯ 5,000/-, 3) ಕಪ್ಪು ಬಣ್ಣದ ದನ-1, ಇದರ ಅಂದಾಜು ಮೌಲ್ಯ 5,000/-, 4) ಕಪ್ಪು ಬಣ್ಣದ ದನ-1, ಇದರ ಅಂದಾಜು ಮೌಲ್ಯ 5,000/-, 5) ಕಪ್ಪು ಬಣ್ಣದ ದನ-1, ಇದರ ಅಂದಾಜು ಮೌಲ್ಯ 5,000/-, 6) ಕಂದು ಮಿಶ್ರಿತ ಕಪ್ಪು ದನ -1 ಅಂದಾಜು ಮೌಲ್ಯ 5,000/- 7) ಕಂದು ಬಣ್ಣದ 2 ತಿಂಗಳ ಹೆಣ್ಣು ಕರು-1, ಅಂದಾಜು ಮೌಲ್ಯ ರೂ. 2,000/- 8) ಕಂದು ಬಣ್ಣದ 2 ತಿಂಗಳ ಹೆಣ್ಣು ಕರು-1, ಅಂದಾಜು ಮೌಲ್ಯ ರೂ. 2,000/- 9) Vivo ಕಂಪನಿಯ ಮೊಬೈಲ್ -1 ಅಂದಾಜು ಮೌಲ್ಯ ರೂ 2,000/- 10) ಮೈಕ್ರೋಮ್ಯಾಕ್ಸ್ ಕಂಪನಿಯ ಕಪ್ಪು ಬಣ್ಣದ ಮೊಬೈಲ್ -1 ಅಂದಾಜು ಮೌಲ್ಯ 2000/- 11) ನಗದು ರೂ 1,850/- ಸ್ವತ್ತುಗಳನ್ನು ಪೊಲೀಸರು ಸ್ವಾದೀನ ಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 155/2026 ಕಲಂ: 303(3) ಜೊತೆಗೆ 3(5) ಬಿ.ಎನ್.ಎಸ್ ಕಲಂ 8.9.11 ಗೋ ಹತ್ಯೆ ತಡೆ ಹಾಗೂ ಜಾನುವಾರು ಸಂರಕ್ಷಣ ಕಾಯ್ದೆ 1964 ಮತ್ತು ಕಲಂ 11 (1)(ಡಿ) ಪ್ರಾಣಿ ಹಿಂಸೆ ತಡೆ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.
