IMG_20261014_132756.png
Spread the love

ಗಂಗೊಳ್ಳಿ:  ದಿನಾಂಕ:14-10-2026(ಹಾಯ್ ಉಡುಪಿ ನ್ಯೂಸ್) ವಿವಾಹಿತ ಮಹಿಳೆಯೋರ್ವರು ಗಂಡ ನೀಡುತ್ತಿದ್ದ ಮಾನಸಿಕ ಹಿಂಸೆಗೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗಂಗೊಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

ಜಯಶ್ರೀ ಎಂಬವರಿಗೆ ದಿನಾಂಕ: 17/11/2024  ರಂದು ದೇವಲ್ಕುಂದದ N.T.S ಸಾಗರ್‌ ಪ್ಯಾಲೇಸ್‌ ಹಾಲ್‌ ನಲ್ಲಿ 1 ನೇ ಆಪಾದಿತ ಪ್ರಕಾಶ್‌ ಆಚಾರ್ಯ ಎಂಬವರೊಂದಿಗೆ ಹಿಂದೂ ಸಂಪ್ರದಾಯದಂತೆ ಮದುವೆ ಆಗಿದ್ದು, ಮದುವೆಯ ನಂತರ ಆಪಾದಿತ ಪ್ರಕಾಶ್ ಆಚಾರ್ಯ ನು  ತನ್ನ  ಮನೆಯಾದ ಅಮಾಸೆಬೈಲು ತಪ್ಲು ಎಂಬಲ್ಲಿಗೆ ಜಯಶ್ರೀ ರವರನ್ನು ಕರೆದುಕೊಂಡು ಹೋಗಿ ವಾಸ್ತವ್ಯ ಮಾಡಿದ್ದು, ಜಯಶ್ರೀ ರವರ ಗಂಡನ ಅಣ್ಣ  ಪ್ರಭಾಕರ ಮತ್ತು ತಂಗಿ ಪ್ರಶಾಂತಿ ರವರು ಜಯಶ್ರೀ ರವರನ್ನು ನಿನಗೆ ಮಕ್ಕಳಾದರೆ  ನಮ್ಮನ್ನು ನಮ್ಮ ಮಕ್ಕಳನ್ನು  ಪ್ರಕಾಶ್‌ ಆಚಾರ್ಯ ನೋಡುವುದಿಲ್ಲ  ಎಂಬುದಾಗಿ ಪದೇ ಪದೇ ಹೇಳುತ್ತಿದ್ದು, ಜಯಶ್ರೀ ರವರು ಮನೆಯವರಿಗೆ ಪೋನ್‌ ಮಾಡಿದರೆ  ಅವರ ಮೊಬೈಲನ್ನು ತೆಗೆದು ಕೊಂಡು ಚೆಕ್‌ ಮಾಡಿ ಬೆದರಿಸುತ್ತಿದ್ದರು.

ಜಯಶ್ರೀ ರವರು 2025 ನೇ ಡಿಸೆಂಬರ್‌ ತಿಂಗಳಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಮೇಲೆ ಗಂಡ ಪ್ರಕಾಶ್ ಆಚಾರ್ಯ ನು 6 ತಿಂಗಳಿನಿಂದ ಜಯಶ್ರೀ ರವರ ತವರು ಮನೆಗೆ ಬಾರದೇ ಇದ್ದು, ಜಯಶ್ರೀ ರವರು ಮತ್ತು ಆಪಾದಿತ ಪ್ರಕಾಶ್‌ ಆಚಾರ್ಯರವರ ಸಂಸಾರದ ವಿಚಾರದಲ್ಲಿ ದಿನಾಂಕ 11-10-2026 ರಂದು ಜಯಶ್ರೀ ರವರ  ಮನೆಯವರು  ಮತ್ತು ಆಪಾದಿತ ಪ್ರಕಾಶ್ ಆಚಾರ್ಯ ನ ಮನೆಯವರು ಸೇರಿ ಮಾತುಕತೆ ನಡೆಸಿದ ಸಮಯ ಆಪಾದಿತ ಪ್ರಕಾಶ್ ಆಚಾರ್ಯ ನು ಜಯಶ್ರೀ ರವರ ಜೊತೆಯಲ್ಲಿ ಸಂಸಾರ ಮಾಡುವುದಿಲ್ಲವಾಗಿ ಹೇಳಿ ಜಯಶ್ರೀ ರವರನ್ನು ಉದ್ದೇಶಿಸಿ ನೀನು ಮತ್ತು ನಿನ್ನ ಮಗು ಎಲ್ಲಿ ಬೇಕಾದರೂ ಹೋಗಿ ಸಾಯಿರಿ ಎಂಬುದಾಗಿ ಉಧ್ಧಟತನದಿಂದ ಮಾತನಾಡಿ ಜಯಶ್ರೀ ರವರಿಗೆ ಮಾನಸಿಕವಾಗಿ ಹಿಂಸೆ ಕಿರುಕುಳ ನೀಡಿರುತ್ತಾರೆ.

ಇದರಿಂದ ಜಯಶ್ರೀ ರವರು  ಮನನೊಂದು ದಿನಾಂಕ 11/10/2026 ರಂದು ಆಲೂರಿನಲ್ಲಿರುವ ತನ್ನ ತವರು ಮನೆಯಲ್ಲಿ ಫಿನೈಲ್‌ ಸೇವಿಸಿ ಅಸ್ವಸ್ಥ ಗೊಂಡು ಕುಂದಾಪುರದ ಶ್ರೀ ಸಾಯಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ: 47/2026 ಕಲಂ: 85, 352, 351 ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!