file_000000003a7482119c3514f3ac684bc2.png
Spread the love

ಮಲ್ಪೆ: ದಿನಾಂಕ:05-10-2026 (ಹಾಯ್ ಉಡುಪಿ ನ್ಯೂಸ್) ಕೊಡವೂರು ಗ್ರಾಮದ ಭಜನಾ ಮಂದಿರವೊಂದರ ಬಳಿ ಗೂಡಂಗಡಿ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿಯೋರ್ವ ರ ಚಿನ್ನದ ಸರವನ್ನು ಯಾರೋ ಅಪರಿಚಿತರು ಎಳೆದು ಕೊಂಡು ಹೋಗಿರುವ ಬಗ್ಗೆ ನೊಂದ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದಾರೆ.

ಉಡುಪಿ,ಕೊಡವೂರು ಗ್ರಾಮದ ನಿವಾಸಿ ವಿಠಲ ಸುವರ್ಣ (76) ಎಂಬವರು ಕಡವಿನ ಬಾಗಿಲ ವಿಠೋಭ ರುಖುಮಾಯಿ ಭಜನಾ ಮಂದಿರ ಹತ್ತಿರ ಸುಮಾರು 50 ವರ್ಷಗಳಿಂದ ಗೂಡಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿದ್ದು, ದಿನಾಂಕ 04.10.2026 ರಂದು ಪ್ರತಿ ದಿನದಂತೆ ಗೂಡಂಗಡಿ ತೆರೆದಿದ್ದು, ಮದ್ಯಾಹ್ನ 01:00 ಗಂಟೆಗೆ ಇಬ್ಬರು ಮೋಟಾರು ಸೈಕಲ್‌ ನಲ್ಲಿ ಬಂದು ಗೂಡಂಗಡಿಯ ಸ್ವಲ್ಪ ಮುಂದೆ ನಿಲ್ಲಿಸಿ, ಮೋಟಾರು ಸೈಕಲ್‌ ಹಿಂದೆ ಕುಳಿತಿದ್ದ ವ್ಯಕ್ತಿಯು ವಿಠ್ಠಲ ಸುವರ್ಣ ರ ಅಂಗಡಿಗೆ ಬಂದು ವಿಮಲ್‌ ಕೊಡಿ ಎಂದು 20 ರೂಪಾಯಿ ಕೊಡಲು ಬಂದು ಅಲ್ಲೇ ಡಬ್ಬಿಯ ಪಕ್ಕ ಇಟ್ಟಿದ್ದು,

ವಿಠ್ಠಲ ಸುವರ್ಣ ರು ಡಬ್ಬಿಯಲ್ಲಿ ವಿಮಲ್‌ ತೆಗೆಯುವ ಸಮಯದಲ್ಲಿ ಆ ಅಪರಿಚಿತ ವ್ಯಕ್ತಿ ಕೈಗಳಿಂದ ವಿಠ್ಠಲ ಸುವರ್ಣ ರನ್ನು ಬಲವಂತವಾಗಿ ಒತ್ತಿ ಹಿಡಿದು ಕುತ್ತಿಗೆಯಲ್ಲಿದ್ದ 1.1/2 ಪವನ್‌ ಚಿನ್ನದ ಸರವನ್ನು  ಎಳೆದುಕೊಂಡು ಹೋಗಿ ಅಲ್ಲೇ ದೂರದಲ್ಲಿ ನಿಂತಿದ್ದ ಮೊಟಾರು ಸೈಕಲ್‌ ನ್ನು ಏರಿ ಪರಾರಿಯಾಗಿರುತ್ತಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಮಲ್ಪೆ  ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ: 110/2026 ಕಲಂ: 309(4) ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!