IMG_20261004_180812.png
Spread the love

ಹೆಬ್ರಿ: ದಿನಾಂಕ :04/10/2026 (ಹಾಯ್ ಉಡುಪಿ ನ್ಯೂಸ್) ಶಿವಪುರ ಗ್ರಾಮದ ಖಜಾನೆಯ ಸಾರ್ವಜನಿಕ ಸ್ಥಳದಲ್ಲಿ ಪರವಾನಿಗೆ ಇಲ್ಲದೆ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಹೆಬ್ರಿ ಪೊಲೀಸ್ ಠಾಣೆಯ ಪಿಎಸ್ಐ ಲೋಹಿತ್ ಕುಮಾರ್ ಸಿ ಎಸ್ ಅವರು ಬಂಧಿಸಿದ್ದಾರೆ.

ಹೆಬ್ರಿ ಪೊಲೀಸ್ ಠಾಣೆಯ ಪಿಎಸ್ಐ ಲೋಹಿತ್‌ ಕುಮಾರ್‌ ಸಿ ಎಸ್‌   ರವರಿಗೆ  ದಿನಾಂಕ:03-10-2026 ರಂದು ಶಿವಪುರ ಗ್ರಾಮದ ಬೀಟ್‌ ಸಿಬ್ಬಂದಿ ತಿಳಿಸಿದ ಮಾಹಿತಿಯಂತೆ  ಕೂಡಲೇ ಠಾಣೆಯ ಸಿಬ್ಬಂದಿಯವರೊಂದಿಗೆ   ಶಿವಪುರ  ಗ್ರಾಮದ  ಖಜಾನೆ ಶ್ರೀ ಸಾಯಿ ಅಂಗಡಿಯ ಎದುರು ರಸ್ತೆ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ  ಯಾವುದೇ ಪರವಾನಿಗೆ ಇಲ್ಲದೇ ಮದ್ಯದ  ಪ್ಯಾಕೆಟ್‌ ಗಳನ್ನು  ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ಧಾಳಿ ನಡೆಸಿದ್ದಾರೆ .

ದಾಳಿ ನಡೆಸಿದಾಗ ಸ್ಥಳದಲ್ಲಿ ಮದ್ಯ ಮಾರಾಟದಲ್ಲಿ ನಿರತನಾಗಿದ್ದ  ಜಯ ಪ್ರಕಾಶ್‌ ಶೆಟ್ಟಿ (66) ಶಿವಪುರ ಗ್ರಾಮ, ಹೆಬ್ರಿ ತಾಲೂಕು    ಎಂಬವರನ್ನು ಬಂಧಿಸಿ ವಶಕ್ಕೆ ಪಡೆದು ಅವರು ಮಾರಾಟದ ಬಗ್ಗೆ ತಂದಿರಿಸಿದ್ದ 2 ರಟ್ಟಿನ ಬಾಕ್ಸ್‌ ಗಳಲ್ಲಿ ಇಟ್ಟಿದ್ದ ಒರಿಜಿನಲ್‌ ಚಾಯ್ಸ್‌ ಎಂದು ಬರೆದಿರುವ 180 ಎಮ್‌ ಎಲ್‌ನ ಒಟ್ಟು 48 ಟೆಟ್ರಾ ಪ್ಯಾಕೇಟ್‌ಗಳು  ಇನ್ನೊಂದು  ರಟ್ಟಿನ ಬಾಕ್ಸ್‌ ನಲ್ಲಿ ಒರಿಜಿನಲ್‌ ಚಾಯ್ಸ್‌ ಎಂದು ಬರೆದಿರುವ  90 ಎಂ,ಎಲ್‌ 48 ಟೆಟ್ರಾ ಪ್ಯಾಕೇಟ್‌ಗಳು ಹಾಗೂ  ಮೈಸೂರ್‌ ಲ್ಯಾಸ್ಸರ್‌  ಎಂದು ಬರೆದಿರುವ 180 ಎಮ್‌ ಎಲ್‌ನ ಒಟ್ಟು 24 ಟೆಟ್ರಾ ಪ್ಯಾಕೇಟ್‌ಗಳು ಮತ್ತು ಪ್ಲಾಸ್ಟಿಕ್‌ ತೊಟ್ಟೆಯಲ್ಲಿ ಬ್ಯಾಗ್‌ ಪೈಪರ್‌ ವಿಸ್ಕಿ  ಎಂದು ಬರೆದಿರುವ  180 ಎಂ ಎಲ್‌ 2 ಪ್ಯಾಕೇಟ್‌ ಹಾಗೂ  ಒರಿಜಿನಲ್‌ ಚಾಯ್ಸ್‌ ಎಂದು ಬರೆದಿರುವ 90 ಎಮ್‌ ಎಲ್‌ನ  4 ಟೆಟ್ರಾ ಪ್ಯಾಕೇಟ್‌ಗಳನ್ನು, 2 ರಟ್ಟಿನ ಬಾಕ್ಸ್‌ ಗಳು ಪ್ಲಾಸ್ಟಿಕ್‌ ಚೀಲ ಮತ್ತು 1 ಪ್ಲಾಸ್ಟಿಕ್‌ ಸೀಟ್‌  ನ್ನು  ಸ್ವಾಧೀನಪಡಿಸಿಕೊಂಡಿದ್ದಾರೆ.

  ಸ್ವಾಧೀನ ಪಡಿಸಿಕೊಂಡ ಸ್ವತ್ತುಗಳ ಅಂದಾಜು ಮೌಲ್ಯ ಒಟ್ಟು 11,090 /- ರೂ ಆಗಿರುತ್ತದೆ . ಅಲ್ಲದೇ ಮದ್ಯಮಾರಾಟದಿಂದ ಸಂಗ್ರಹಿಸಿದ 220 ರೂ ನಗದನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ: 49/2026 ಕಲಂ: 3̧2 34 ಕರ್ನಾಟಕ ಅಬಕಾರಿ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.

error: No Copying!