IMG_20261002_133504.png
Spread the love

ಬ್ರಹ್ಮಾವರ: ದಿನಾಂಕ:02-10-2026(ಹಾಯ್ ಉಡುಪಿ ನ್ಯೂಸ್) ಬೆಳೆ ರಕ್ಷಣೆಗಾಗಿ ಬಂದೂಕು ಪರವಾನಗಿ ಪಡೆದು ಕೊಂಡಿದ್ದ ವ್ಯಕ್ತಿಯೋರ್ವರು ಅನಧಿಕೃತವಾಗಿ ಬಂದೂಕಿನಲ್ಲಿ ಮಾರ್ಪಾಡು ಮಾಡಿಕೊಂಡು ಅಪರಾಧ ಎಸಗಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯ ಪಿಎಸ್ಐ ಅಶೋಕ್ ಮಾಳಾಬಗಿ ಅವರು ಆಪಾದಿತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಬ್ರಹ್ಮಾವರ ತಾಲೂಕು,33 ನೇ ಶಿರೂರು ಗ್ರಾಮದ ನಿವಾಸಿ ವಿವೇಕಾನಂದ ಕೆ, ತಂದೆ: ದಯಾನಂದ ಕೆ ಎಂಬವರು ಬೆಳೆ ರಕ್ಷಣೆಗಾಗಿ ಪರವಾನಗಿ ಹೊಂದಿರುವ UD-UDI-180-2 (UIN 173040026150182015) ನೇ 0.22 ರೈಫಲ್ಲಿಗೆ ಸಂಬಂಧಪಟ್ಟ ಪ್ರಾಧಿಕಾರದಿಂದ ಯಾವುದೇ ಅನುಮತಿ ಪಡೆಯದೇ ಯಾವುದೋ ದುರುದ್ದೇಶದಿಂದ ಅವರು ಪರವಾನಗಿ ಹೊಂದಿರುವ 0.22 ರೈಫಲ್‌ ನಲ್ಲಿ ಸ್ಕೋಫ್‌ ಆಳವಡಿಸಿ ಮಾರ್ಪಾಡು ಮಾಡಿರುವುದು ಬಂದೂಕು ಪರಿಶೀಲನೆಗೆಂದು ದಿನಾಂಕ: 28/08/2026 ರಂದು ಬ್ರಹ್ಮಾವರ ಪೊಲೀಸ್ ಠಾಣೆಗೆ ತಂದು ಹಾಜರುಪಡಿಸಿದ್ದರು.

ಪೊಲೀಸರಿಗೆ ಬಳಿಕ ಪರಿವೀಕ್ಷಣೆ ವೇಳೆ ಈ ಮಾರ್ಪಾಡು ಕಂಡು ಬಂದಿದ್ದು, ವಿವೇಕಾನಂದ.ಕೆ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ   ಬ್ರಹ್ಮಾವರ ಪೊಲೀಸ್‌ ಠಾಣೆಯ ಪಿಎಸ್ಐ ಅಶೋಕ್ ಮಾಳಾಬಗಿ ಅವರು ದೂರು ದಾಖಲಿಸಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ  ಅಪರಾಧ ಕ್ರಮಾಂಕ 181/2026 ಕಲಂ: 25 ಶಸ್ತ್ರಾಸ್ತ್ರ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.

error: No Copying!