ಮಣಿಪಾಲ: ದಿನಾಂಕ:27.09.2026 (ಹಾಯ್ ಉಡುಪಿ ನ್ಯೂಸ್) ಶಿವಳ್ಳಿ ಗ್ರಾಮದ ಸಿಂಡಿಕೇಟ್ ಸರ್ಕಲ್ ಬಳಿಯ ರೋಯಲ್ ಲೀಪ್ ಫ್ಯಾಮಿಲಿ ಪಾನ್ ಪಾರ್ಲರ್ ಗೆ ದಾಳಿ ನಡೆಸಿದ ಮಣಿಪಾಲ ಪೊಲೀಸ್ ಠಾಣೆಯ ಪಿಎಸ್ಐ ತಿಮ್ಮೇಶ್ ಬಿ ಎನ್ ಅವರು ಅಕ್ರಮವಾಗಿ ಇ-ಸಿಗರೇಟ್ ಗಳನ್ನು ಮಾರಾಟ ಮಾಡುತ್ತಿದ್ದ ನಿಖಿಲ್ ಸದಾನಂದ ಪೂಜಾರಿ ಎಂಬ ವ್ಯಕ್ತಿ ಯನ್ನು ಬಂಧಿಸಿದ್ದಾರೆ.
ಮಣಿಪಾಲ ಪೊಲೀಸ್ ಠಾಣೆಯ ಪಿಎಸ್ಐ ತಿಮ್ಮೇಶ್ ಬಿ ಎನ್ ಅವರಿಗೆ ದಿನಾಂಕ:26-09-2026 ರಂದು ಸಾರ್ವಜನಿಕರಿಂದ ಬಂದ ಖಚಿತ ವರ್ತಮಾನದಂತೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಸಿಂಡಿಕೇಟ್ ಸರ್ಕಲ್ ಬಳಿ ಇರುವ ರೋಯಲ್ ಲೀಪ್ ಪ್ಯಾಮಿಲಿ ಪಾನ್ ಪಾರ್ಲರ್ ಗೆ ಪೊಲೀಸ್ ಸಿಬ್ಬಂದಿಯವರೊಂದಿಗೆ ದಾಳಿಮಾಡಿ ಅಲ್ಲಿ ಅಕ್ರಮವಾಗಿ ನಿಷೇದಿತ ಇ – ಸಿಗರೇಟ್ ಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿತ ನಿಖಿಲ್ ಸದಾನಂದ ಪೂಜಾರಿ (30) ಪಡು ಗ್ರಾಮ, ಕಾಪು ತಾಲೂಕು ಎಂಬವನ ಬಳಿ ಇದ್ದ ವಿವಿಧ ಬಗೆಯ ನಿಷೇದಿತ ಇ – ಸಿಗರೇಟ್‌ಗಳನ್ನು ಹಾಗೂ ನಗದನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಸ್ವಾಧೀನಪಡಿಸಿಕೊಂಡ ಸ್ವತ್ತಿನ ಒಟ್ಟು ಮೌಲ್ಯ ರೂ. 29,580/- ರೂ ಆಗಿರುತ್ತದೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 159/2026 ಕಲಂ: 7, 8 Prohibition of Electronic Cigarettes Act ರಂತೆ ಪ್ರಕರಣ ದಾಖಲಾಗಿದೆ.
