file_000000009bf48207928bfca10859152a.png
Spread the love

ಬೈಂದೂರು: ದಿನಾಂಕ:26-09-2026(ಹಾಯ್ ಉಡುಪಿ ನ್ಯೂಸ್) ಶಿರೂರು ಗ್ರಾಮದ ಅರಮನೆ ಹಕ್ಲು ನಿವಾಸಿ ಮಹಿಳೆ ಯೋರ್ವರಿಗೆ ಕ್ಷುಲ್ಲಕ ಕಾರಣಕ್ಕೆ ಇನ್ನೋರ್ವ ಮಹಿಳೆ ಹಲ್ಲೆ ನಡೆಸಿರುವ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಶಿರೂರು ಗ್ರಾಮದ ಅರಮನೆ ಹಕ್ಲು ನಿವಾಸಿ ಆರ್ ಹೆಚ್ ಸಾವಿತ್ರಿ (45) ಎಂಬವರು ಆರೋಪಿತಳಾದ ಸುಜಾತ ಎಂಬವರಿಂದ ಈ ಹಿಂದೆ ಒಂದು ದಿನದ ಮಟ್ಟಿಗೆ ಗ್ಯಾಸ್‌ ಒಲೆಯನ್ನು ಕೇಳಿ ಪಡೆದುಕೊಂಡಿದ್ದು ನಂತರ ಈ ಗ್ಯಾಸ್‌ ಒಲೆಯನ್ನು ವಾಪಾಸು ಕೊಡಲು ಹೋದಾಗ ಆರೋಪಿತೆಯು ಸಾವಿತ್ರಿರವರಲ್ಲಿ ನೀನು ನನ್ನ ಗ್ಯಾಸ್ ಒಲೆ ಹಾಳು ಮಾಡಿ ಕೊಟ್ಟಿದೀಯಾ ಎಂದು ಹೇಳಿದ್ದು ನಂತರ ಸಾವಿತ್ರಿ ರವರು ಗ್ಯಾಸ್‌ ಒಲೆಯನ್ನು ರಿಪೇರಿಗೆ ಕೊಟ್ಟಿದ್ದು ಅಲ್ಲಿಗೆ ಬಂದ ಆರೊಪಿತೆಯು ಈ ಗ್ಯಾಸ್‌ ಒಲೆ ತನ್ನದಲ್ಲ ಎಂದು ಹೇಳಿ ಈ ಒಲೆಯನ್ನು ಪಡೆದುಕೊಳ್ಳದೇ ಇದ್ದು ಇದೇ ಕಾರಣವನ್ನು ಮುಂದಿಟ್ಟುಕೊಂಡು ಆರೋಪಿತೆ ಸುಜಾತ ಳು  ದಿನಾಂಕ 25-09-2026 ರಂದು ಮಧ್ಯಾಹ್ನ ಸಾವಿತ್ರಿ ರವರು ಕಸ್ಟಮರ್‌ ಗೆ ಸ್ಕೂಟಿ ಸವಾರಿ ಮಾಡಲು ಕಲಿಸುತ್ತಾ ಗಾಂಧಿ ಮೈದಾನದಲ್ಲಿ ಇರುವಾಗ  ಸಾವಿತ್ರಿ ರವರ ಬಳಿ ಬಂದು ನನ್ನ ಗ್ಯಾಸ್‌ ಒಲೆಯನ್ನು ಈಗಲೆ ತಂದುಕೊಡು ಎಂದು ಹೇಳಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಸಾವಿತ್ರಿ ರವರ ತಲೆಗೆ ಹೊಡೆದು ಸಾವಿತ್ರಿ ರವರ ಕೈಯಲ್ಲಿದ್ದ ಮೊಬೈಲ್‌ ಕಸಿದು ಕೊಂಡು ಅದೇ ಮೊಬೈಲ್‌ ನಲ್ಲಿ ತಲೆಗೆ ಹೊಡೆದಿದ್ದಾಳೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ: 123/2026 ಕಲಂ 115(2) 118(1) 352 BNS ರಂತೆ ಪ್ರಕರಣ ದಾಖಲಾಗಿದೆ.

error: No Copying!