IMG_20260920_162615.png
Spread the love

ಶಿರ್ವಾ: ದಿನಾಂಕ:20-09-2026(ಹಾಯ್ ಉಡುಪಿ ನ್ಯೂಸ್) ಕಳತ್ತೂರು ಗ್ರಾಮದ ನಡಿಗುತ್ತು ಎಂಬಲ್ಲಿ ಮೇಯಲು ಬಿಟ್ಟಿದ್ದ ದನವನ್ನು ಟೆಂಪೋ ವೊಂದರಲ್ಲಿ ಕಳ್ಳತನ ಮಾಡಿ ಕೊಂಡು ಹೋಗಿದ್ದಾರೆ ಎಂದು ಮಹಿಳೆಯೋರ್ವರು ಪೊಲೀಸರಿಗೆ ದೂರು ನೀಡಿದ್ದಾರೆ.

ಕಾಪು ,ಕಳತ್ತೂರು ಗ್ರಾಮದ ನಿವಾಸಿ ವಸಂತಿ ಸುನೀತಾ ಕ್ವಾಡ್ರಸ್‌ (48) ಎಂಬವರು ದಿನಾಂಕ 19/09/2026 ರಂದು ಬೆಳಿಗ್ಗೆ 08:00 ಗಂಟೆಗೆ ಕಾಪು ತಾಲೂಕು ಕಳತ್ತೂರು ಗ್ರಾಮದ ನಡಿಗುತ್ತು ಎಂಬಲ್ಲಿ ತನ್ನ 3 ದನಗಳನ್ನು ಕಟ್ಟಿ 2 ದನಗಳನ್ನು ಅವುಗಳ ಜತೆಗೆ ಮೇಯಲು ಬಿಟ್ಟಿರುತ್ತಾರೆ, ಮದ್ಯಾಹ್ನ ವಿಪರೀತ ಬಿಸಿಲು ಇರುವ ಕಾರಣ ದನಗಳನ್ನು ನೆರಳಲ್ಲಿ ಕಟ್ಟುವ ಬಗ್ಗೆ ಮಧ್ಯಾಹ್ನ 1:30 ಗಂಟೆಗೆ ಹೋಗಿ ಅಲ್ಲಿಯೇ ಪಕ್ಕದ ನೆರಳಿರುವ ಜಾಗದಲ್ಲಿ 3 ದನಗಳನ್ನು ಕಟ್ಟಿ 2 ದನಗಳನ್ನು ಮೇಯಲು ಬಿಟ್ಟಿರುತ್ತಾರೆ. ಸಂಜೆ 4:00 ಗಂಟೆಗೆ  ವಸಂತಿ ಸುನೀತಾ ಕ್ವಾಡ್ರಸ್ ರವರ ಗಂಡ ಲೂವೀಸ್‌ ಕ್ವಾಡ್ರಸ್‌ ರವರು ದನಗಳನ್ನು ಮನೆಗೆ ಕರೆತರಲು ಹೋದಾಗ ಅಲ್ಲಿ ಕಟ್ಟಿದ 3 ದನಗಳಿದ್ದು, ಕಟ್ಟದೇ ಬಿಟ್ಟಿದ್ದ 2 ದನಗಳಲ್ಲಿ 1 ಕಪ್ಪು ಬಣ್ಣದ ಎರಡು ವರ್ಷ ಪ್ರಾಯದ ದನ ಕಾಣದೇ ಇದ್ದು, ವಸಂತಿ ಸುನೀತಾ ಕ್ವಾಡ್ರಸ್ ರ ಗಂಡ  ಕರೆ ಮಾಡಿ ತಿಳಿಸಿದಾಗ, ಕೂಡಲೇ ಅಲ್ಲಿಗೆ ಹೋಗಿ ದನವನ್ನು ತನ್ನ ಗಂಡನೊಂದಿಗೆ ಹುಡುಕಾಡಿದಾಗ ಸ್ವಲ್ಪ ದೂರದಲ್ಲಿ ಒಂದು ಟೆಂಪೋ ಇರುವುದು ಕಂಡು ಬಂದಿರುತ್ತದೆ. ಆಗ ವಸಂತಿ ಸುನೀತಾ ಕ್ವಾಡ್ರಸ್ ರವರು ಟೆಂಪೋ ಬಳಿ ಹೋಗಿ ನೋಡಿದಾಗ ಟೆಂಪೋದಲ್ಲಿ ಅವರ ಕಾಣೆಯಾದ ದನ ಇದ್ದು, ಅದರ ಜೊತೆ ಇನ್ನೊಂದು ದನ ಕೂಡ ಹಿಂಸಾತ್ಮಕ ರೀತಿಯಲ್ಲಿ ಕಟ್ಟಿರುವುದು ಕಂಡು ಬಂದಿರುತ್ತದೆ.

ಅಲ್ಲದೇ ಟೆಂಪೋದ ಬಳಿ ಅವರಿಗೆ ಪರಿಚಯದ ಉಮ್ಮರಬ್ಬ ಮತ್ತು ಇತರರು ಇದ್ದು, ದನವನ್ನು ಟೆಂಪೋದಲ್ಲಿ ಏಕೆ ಕಟ್ಟಿದ್ದೀರಿ ಎಂದು ಕೇಳಿದ ಕೂಡಲೇ ಟೆಂಪೋದ ಚಾಲಕನು ಟೆಂಪೋವನ್ನು ಚಲಾಯಿಸಿಕೊಂಡು ಹೋಗಿರುತ್ತಾನೆ. ಟೆಂಪೋದ ನಂಬ್ರವನ್ನು ನೋಡಿದಾಗ KA-19-B-5641 ಆಗಿರುತ್ತದೆ.  ವಸಂತಿ ಸುನೀತಾ ಕ್ವಾಡ್ರಸ್ ರ ದನವನ್ನು ವಧೆ ಮಾಡಿ ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶಕ್ಕೆ ಟೆಂಪೋದಲ್ಲಿ ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಹಾಕಿ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ವಸಂತಿ ಸುನೀತಾ ಕ್ವಾಡ್ರಸ್ ರವರು ನೀಡಿದ ದೂರಿನಂತೆ ಶಿರ್ವಾ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 77/2026 ಕಲಂ:303(2) R/w 3(5) BNS‌ ಮತ್ತು 5,12 THE KARNATAKA PREVENTION OF SLAUGHTER AND PRESERVATION OF CATTLE ACT-2020 ರಂತೆ ಪ್ರಕರಣ ದಾಖಾಲಾಗಿದೆ.

error: No Copying!