ಮಂಗಳೂರು: ದಿನಾಂಕ:18-09-2026(ಹಾಯ್ ಉಡುಪಿ ನ್ಯೂಸ್)
ಮಂಗಳೂರು:ಕರಾವಳಿಯ ಜನರ ಆಶಯ, ನಿರೀಕ್ಷೆ ಹಾಗೂ ಅಭಿವೃದ್ಧಿಯ ಕನಸುಗಳಿಗೆ ಇನ್ನಷ್ಟು ಬಲ ತುಂಬಲು, ಇಂದು ಮಂಗಳೂರಿನಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಸಲು ಮಂಗಳೂರಿಗೆ ಆಗಮಿಸಿರುವ ಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್ ಅವರು ಇಂದು ಶತಮಾನಗಳಷ್ಟು ಪುರಾತನವಾದ ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಸ್ಥಾನಕ್ಕೆ ತೆರಳಿ, ದೇವರ ದರ್ಶನ ಪಡೆದರು.
ನಾಡಿನ ಸಮಸ್ತ ಜನರ ಒಳಿತಿಗಾಗಿ, ಮಳೆ- ಬೆಳೆ, ಸಮೃದ್ಧಿಗಾಗಿ ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್ ಅವರು ಪ್ರಾರ್ಥನೆ ಸಲ್ಲಿಸಿದರು.
