ಮಣಿಪಾಲ: ದಿನಾಂಕ: 17-09-2026(ಹಾಯ್ ಉಡುಪಿ ನ್ಯೂಸ್) ಶಿವಳ್ಳಿ ಗ್ರಾಮದ ಪೆರಂಪಳ್ಳಿ ಬ್ರಿಡ್ಜ್ ಬಳಿ ಕಾರಿನಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಮಹೇಶ್ ಪ್ರಸಾದ್ ಅವರು ಬಂಧಿಸಿದ್ದಾರೆ.
ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಮಹೇಶ್ ಪ್ರಸಾದ್ ಅವರಿಗೆ ದಿನಾಂಕ: 16/09/2026 ರಂದು 07:00 ಗಂಟೆ ಸಮಯಕ್ಕೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಪೆರಂಪಳ್ಳಿ ಬ್ರಿಡ್ಜ್ ಬಳಿ ಸಾರ್ವಜನಿಕ ಸ್ಥಳದಲ್ಲಿ KA19-MK-2021 ನೇ ನಂಬ್ರದ ಬಿಳಿ ಬಣ್ಣದ ಮಾರುತಿ ಸ್ವಿಪ್ಟ್ ಕಾರಿನಲ್ಲಿ MDMA ಮಾದಕ ವಸ್ತುಗಳನ್ನು ಇಟ್ಟುಕೊಂಡು ಉಡುಪಿ, ಪೆರಂಪಳ್ಳಿ, ಮಣಿಪಾಲ ಕಡೆಗಳಲ್ಲಿ ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ದಾರರು ಮಾಹಿತಿ ನೀಡಿದ್ದು ಕೂಡಲೇ ಸಿಬ್ಬಂದಿಯವರೊಂದಿಗೆ ಉಡುಪಿ ನಗರ, ನಿಟ್ಟೂರು, ಅಂಬಾಗಿಲು, ದೊಡ್ಡಣಗುಡ್ಡೆ, ಪೆರಂಪಳ್ಳಿ ಕಡೆಗಳಲ್ಲಿ ರೌಂಡ್ಸ್ ಮಾಡಿ ಪೆರಂಪಳ್ಳಿ ರೈಲ್ವೇ ಬ್ರಿಡ್ಜ್ ಬಳಿ ವಾಹನ ತಪಾಸಣೆ ಮಾಡುತ್ತಿರುವಾಗ ದಿನಾಂಕ: 17/09/2026 ರಂದು 12:10 ಗಂಟೆಗೆ ಅಂಬಾಗಿಲು ಕಡೆಯಿಂದ ಬಂದ KA19-MK-2021 ನೇ ನಂಬ್ರದ ಬಿಳಿ ಬಣ್ಣದ ಮಾರುತಿ ಸ್ವಿಪ್ಟ್ ಕಾರನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿ ಆರೋಪಿತ 1) ಅಕ್ಬರ್ ಮಹಮ್ಮದ್ ಬ್ಯಾರಿ (44) ಉದ್ಯಾವರ ಗ್ರಾಮ ಉಡುಪಿ ತಾಲೂಕು 2. ಸೈಯದ್ ಸುಹೇಲ್ (26) ಎಮ್, ಎಸ್ ಪಾಳ್ಯ, ಬೆಂಗಳೂರು ಎಂಬವರುಗಳನ್ನು ಬಂಧಿಸಿ ದಸ್ತಗಿರಿ ಮಾಡಿದ್ದಾರೆ .
ಆರೋಪಿತರ ಕಾರಿನಲ್ಲಿ ಇದ್ದ ಸುಮಾರು 1,00,000/- ರೂ ಮೌಲ್ಯದ ಒಟ್ಟು 30 ಗ್ರಾಂ ತೂಕದ MDMA ಮಾದಕ ವಸ್ತುವನ್ನು ಹಾಗೂ ಆರೋಪಿತರುಗಳ 04 ಮೊಬೈಲ್ ಗಳನ್ನು, 01 ಡೊಂಗಲ್ ನ್ನು ಮತ್ತು 9500/- ನಗದು ಹಣವನ್ನು ಹಾಗೂ ಆರೋಪಿತರುಗಳು ಅಪರಾಧಕ್ಕೆ ಉಪಯೋಗಿಸಿದ KA19-MK-2021 ನೇ ನಂಬ್ರದ ಬಿಳಿ ಬಣ್ಣದ ಮಾರುತಿ ಸ್ವಿಪ್ಟ್ ಕಾರನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 155/2026 ಕಲಂ: 8(c) 22(c) NDPS ACT ರಂತೆ ಪ್ರಕರಣ ದಾಖಲಾಗಿದೆ.


