file_000000005fc081f5a64e22aeb8e7ca79.png
Spread the love

ಕುಂದಾಪುರ: ದಿನಾಂಕ:16-09-2026(ಹಾಯ್ ಉಡುಪಿ ನ್ಯೂಸ್) ಮೂಡ್ಲಕಟ್ಟೆ ನಿವಾಸಿ ಯೋರ್ವರಿಗೆ ಹಳೆಯ ದ್ವೇಷದಿಂದ ಗಣೇಶ ಎಂಬವ ಹಲ್ಲೆ ನಡೆಸಿರುವ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕುಂದಾಪುರ ,ಕಂದಾವರ ಗ್ರಾಮದ ನಿವಾಸಿ ಸಂಕೇತ (21) ಎಂಬವರು ದಿನಾಂಕ 12/09/2026 ರಂದು ಬೆಳಿಗ್ಗೆ ಕಂದಾವರ ಗ್ರಾಮದ ಮೂಡ್ಲಕಟ್ಟೆ ಎಂಬಲ್ಲಿ ತಮ್ಮ ತಂದೆಯ ಅಂಗಡಿ ಬಳಿ ತನ್ನ ಅಕ್ಕ ಶಿಲ್ಪಾ ರವರೊಂದಿಗೆ ಇರುವಾಗ ಗಣೇಶ ಎಂಬುವವನು ಅವರನ್ನು ಗುರಾಯಿಸಿಕೊಂಡು ಹೋಗಿರುತ್ತಾನೆ.

ನಂತರ ಬೆಳಿಗ್ಗೆ 09:45 ಗಂಟೆಗೆ ಸಂಕೇತರವರು ಅವರ ಅಕ್ಕ ಶಿಲ್ಪಾರವರೊಂದಿಗೆ KA-20-EP-0861 ನೇ ನಂಬ್ರದ ಸ್ಕೂಟರ್‌ ನಲ್ಲಿ ಮಾರಣಕಟ್ಟೆಗೆ ಹೊರಟಾಗ ಅವರ ಅಂಗಡಿಯ ಸ್ವಲ್ಪ ಮುಂದಕ್ಕೆ ಗಣೇಶನು ನಮ್ಮ ಸ್ಕೂಟರ್‌ ನ್ನು ಅಡ್ಡಗಟ್ಟಿ ನಿಲ್ಲಿಸಿ ಸಂಕೇತ ರವರಿಗೆ ಅವಾಚ್ಯವಾಗಿ ಬೈದು ಕೈಯಿಂದ ಹೊಡೆಯಲು ಆರಂಭಿಸಿದ್ದು ಆಗ ಅಲ್ಲೇ ಇದ್ದ ಸಂಕೇತ ರವರ ಅಕ್ಕ ತಡೆಯಲು ಬಂದಿದ್ದು ಅವರಿಗೂ ಹೊಡೆದು, ಸಂಕೇತರವರಿಗೂ ಹೊಡೆದು ಕಾಲಲ್ಲಿ ತುಳಿದು, ಬೆನ್ನಿಗೆ ಹೊಡೆದು ಸಂಕೇತರವರ ಶರ್ಟ್‌ ನ್ನು ಹರಿದು ಕೆಟ್ಟದಾಗಿ ಬೈದು ಬೆದರಿಕೆ ಹಾಕಿ ದೂಡಿಕೊಂಡು ಬಂದಾಗ ಅಕ್ಕಪಕ್ಕದವರೆಲ್ಲಾ ಬಂದು ಸಂಕೇತರವರನ್ನು ಆತನಿಂದ ಬಿಡಿಸಿರುತ್ತಾರೆ.

ಆಗ ಗಣೇಶನು ಬೆದರಿಕೆ ಹಾಕಿ ಹೋಗಿರುತ್ತಾನೆ. ಈ ಹಿಂದೆ ಗಣೇಶನು ಸಂಕೇತರವರ ಮೇಲೆ ಹಲ್ಲೆ ಮಾಡಿದಾಗ ಅವನ ಮೇಲೆ ಪೊಲೀಸ್‌ ಕೇಸ್‌ ದಾಖಲಿಸಿದ್ದು ಅದೇ ದ್ವೇಷದಿಂದ ಈಗ ಪುನಃ ಹಲ್ಲೆ ಮಾಡಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಸಂಕೇತರವರು ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 50/2026 ಕಲಂ: 126(2), 115(2), 352, 351(2) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!