ಸಿನಿಮಾ: ದಿನಾಂಕ:14-09-2026(ಹಾಯ್ ಉಡುಪಿ ನ್ಯೂಸ್) ವಿಶ್ವಾದ್ಯಂತ 250 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿರುವ ತಮಿಳು ಸ್ಟಾರ್ ನಟ ಸೂರ್ಯ ನಟನೆಯ ʼವಿಶ್ವನಾಥ್ ಅಂಡ್ ಸನ್ಸ್ʼ (Vishwanath and Sons) ಸಿನಿಮಾ ಇದಿಗ ಓಟಿಟಿಯಲ್ಲೂ ಸದ್ದು ಮಾಡುತ್ತಿದೆ. ಲವಲವಿಕೆಯ ನಟನೆ, ಲೈಟ್ ಹಾರ್ಟೆಡ್ ಕಥೆ, ಒಂದೊಳ್ಳೆ ಎಂಟರ್‌ಟೇನ್‌ಮೆಂಟ್ ಈ ಸಿನಿಮಾದ ಹೈಲೈಟ್. ಇದರಲ್ಲಿ ಸೂರ್ಯ ಅವರ ಬ್ಯಾಲೆನ್ಸ್ಡ್ ನಟನೆಗೆ ಪ್ರೇಕ್ಷಕರು ಫುಲ್ ಮಾರ್ಕ್ಸ್ ನೀಡಿದ್ದಾರೆ. ಇದರಲ್ಲಿ ಪ್ಲೆಸೆಂಟ್ ಸರ್ಪ್ರೈಸಿಂಗ್ ಆಗಿರುವುದು ನಾಯಕಿ ಮಮಿತಾ ಬೈಜು ಆಕ್ಟಿಂಗ್. ಆಹ್, ಎಂಥಾ ಪರ್ಫಾಮರ್! ಅಂತ ಅವರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಹರಿದಾಡುತ್ತಿದೆ. ಕಳೆದೆರಡು ದಿನಗಳಿಂದ ಇನ್‌ಸ್ಟಾಗ್ರಾಂನಲ್ಲಿ ಈ ಸಿನಿಮಾದ ಕ್ಲಿಪ್‌ಗಳೇ ಓಡಾಡುತ್ತಿದ್ದು, ಜನ ಮತ್ತೆ ಮತ್ತೆ ಕೆಲವು ಸೀನ್‌ಗಳನ್ನು ನೋಡಿ ಎನ್‌ಜಾಯ್ ಮಾಡುತ್ತಿದ್ದಾರೆ. ಈ ಸಿನಿಮಾವನ್ನು ವೆಂಕಿ ಅಟ್ಲೂರಿ ನಿರ್ದೇಶಿಸಿದ್ದಾರೆ.
ಆಗಸ್ಟ್ 14 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಸಿನಿಮಾ ಸೆಪ್ಟೆಂಬರ್ 11 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ತಮಿಳು, ತೆಲುಗು, ಕನ್ನಡ, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾವನ್ನು ನೋಡಬಹುದು. Vishwanath and Sons Vishwanath and Sons ಕಥೆ ಏನು? ಸಿನಿಮಾದ ಕಥೆ ಸಂಜಯ್ ವಿಶ್ವನಾಥ್ ಎಂಬ ಪಾತ್ರದ ಸುತ್ತ ಸಾಗುತ್ತದೆ. ಆತ ವಿಶ್ವವಿಖ್ಯಾತ ಶೂಟರ್. ಜೊತೆಗೆ ಬಿಲಿಯನೇರ್ ಉದ್ಯಮಿ. ತನ್ನ ಲೈಫ್‌ನಲ್ಲಿ ಎಲ್ಲವೂ ಸರಿಯಾಗಿದೆ ಅಂತ ಈ ಸಂಜಯ್ ಭಾವಿಸುವ ಹೊತ್ತಲ್ಲೇ ಅವನ ಲೈಫ್‌ನಲ್ಲಿ ಅನಿರೀಕ್ಷಿತ ತಿರುವುಗಳು ಬರುತ್ತವೆ. ಆತ ಜೀವಕ್ಕಿಂತ ಹೆಚ್ಚು ಪ್ರೀತಿಸುವ ಮಹಾನ್ ತುಂಟ ವ್ಯಕ್ತಿತ್ವದ ಅಮ್ಮನಿಗೆ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಆ ಅಮ್ಮನಿಗೆ ಮೊಮ್ಮಕ್ಕಳನ್ನು ಆಡಿಸುವ, ಕುಟುಂಬದ ಫೋಟೋ ಫ್ರೇಮ್‌ನಲ್ಲಿ ತನ್ನ ವಂಶದ ಮುಂದುವರಿಕೆಯನ್ನು ನೋಡುವ ಹಂಬಲ. ಆದರೆ ನಲವತ್ತೆರಡು ವರ್ಷ ವಯಸ್ಸಿನ ಸಂಜಯ್‌ಗೆ ಮದುವೆ ಅಂದರೆ ಬಹುದೂರ. ಅಮ್ಮನಿಗಾಗಿ ಆಗ ಸರೋಗೆಸಿ ಮೂಲಕ ತನ್ನದೇ ಮಗುವನ್ನು ಪಡೆಯುತ್ತಾನೆ. ಆದರೆ ಮುಂದೆ ಯಾವುದೂ ಆತ ಅಂದುಕೊಂಡ ಹಾಗೆ ಆಗೋದಿಲ್ಲ. ಕಾಮಿಡಿಯಾಗಿ, ಸೊಗಸಾಗಿ ಕಥೆಯ ನಿರೂಪಣೆ ಇದೆ.
ಸೂರ್ಯನ ಹೊಸ ಇಮೇಜ್ ಸೂರ್ಯ ಅವರ ನಟನೆ ಈ ಸಿನಿಮಾದ ದೊಡ್ಡ ಶಕ್ತಿ. ಅವರ ಬ್ಯಾಲೆನ್ಸ್ಡ್ ಆಕ್ಟಿಂಗ್‌ಗೆ ಭಾರೀ ಪ್ರಶಂಸೆ ಸಿಕ್ಕಿದೆ. ಮಾಸ್ ಹೀರೋ ಇಮೇಜ್‌ಗಿಂತ ಇಲ್ಲಿ ಸೂರ್ಯ ಅವರನ್ನು ಹೆಚ್ಚು ಸಹಜವಾಗಿ ನೋಡುವ ಅವಕಾಶ ಇದೆ. ಮಮಿತಾ ಬೈಜು ಮ್ಯಾಡಿ ಪಾತ್ರದಲ್ಲಿ ಪ್ರೇಕ್ಷಕರ ಅಚ್ಚುಮೆಚ್ಚಾಗಿದ್ದಾರೆ. ಏನ್ ಸಖತ್ತಾಗಿ ಆಕ್ಟಿಂಗ್ ಮಾಡ್ತಾಳೆ ಗುರೂ ಅಂತ ಯಂಗ್ ಆಡಿಯನ್ಸ್ ಕಾಮೆಂಟ್ ಮಾಡ್ತಿದ್ದಾರೆ. ಈ ಜನರೇಶನ್ ಹುಡುಗ ಹುಡುಗಿಯರಿಗೆ ಬೈಜು ಆಕ್ಟಿಂಗ್ ಬಹಳ ಇಷ್ಟವಾಗಿದೆ. ಜೆನ್ ಜೀಗಳ ಆಟಿಟ್ಯೂಡ್, ಲೈಫ್‌ಅನ್ನು ಸಹಜವಾಗಿ ಹಗುರವಾಗಿ ತೆಗೆದುಕೊಳ್ಳುವ ಬಗೆ, ಚೂಟಿ, ಚುರುಕುತನ, ಅದನ್ನು ಮೀರಿಸುವ ಜಾಣ್ಮೆ ಎಲ್ಲವನ್ನೂ ಅವರು ಅದ್ಭುತವಾಗಿ ತೆರೆಯ ಮೇಲೆ ತಂದಿದ್ದಾರೆ. ಎಮೋಶನ್ ಮತ್ತು ಕಾಮಿಡಿಯ ಹದವಾದ ಬ್ಲೆಂಡ್ ಸಿನಿಮಾದ (cinema) ಇನ್ನೊಂದು ಹೈಲೈಟ್ ಕುಟುಂಬದ ಭಾವನಾತ್ಮಕ ದೃಶ್ಯಗಳು, ಪ್ರೀತಿ, ಹಾಸ್ಯ ಮತ್ತು ಸಂಬಂಧಗಳ ನಡುವೆ ನಡೆಯುವ ಸಂಘರ್ಷ ಕಥೆಗೆ ಒಳ್ಳೆಯ ಎಮೋಷನಲ್ ಟಚ್ ಕೊಡುತ್ತವೆ. ನಿರ್ದೇಶಕ ವೆಂಕಿ ಅಟ್ಲೂರಿ ಕುಟುಂಬ ಪ್ರೇಕ್ಷಕರಿಗೆ ಇಷ್ಟವಾಗುವ ರೀತಿಯಲ್ಲಿ ಸಿನಿಮಾವನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಕೆಲವರಿಗೆ ಕಥೆ ಸ್ವಲ್ಪ ನಿಧಾನವಾಗಿ ಸಾಗುತ್ತದೆ ಅಥವಾ ಸ್ಕ್ರಿಪ್ಟ್ ಇನ್ನಷ್ಟು ಬಲವಾಗಿರಬಹುದಿತ್ತು ಎನ್ನುವ ಅಭಿಪ್ರಾಯವೂ ಇದೆ. ಆದರೆ ಅಭಿನಯ ಮತ್ತು ಭಾವನಾತ್ಮಕ ಕ್ಷಣಗಳು ಆ ಕೊರತೆಯನ್ನು ಸಾಕಷ್ಟು ಮಟ್ಟಿಗೆ ಸರಿದೂಗಿಸುತ್ತವೆ.
ನಟ ಸೂರ್ಯ ಅವರ ‘ವಿಶ್ವನಾಥ್ ಆಂಡ್ ಸನ್ಸ್’ ಟ್ರೈಲರ್ ರಿಲೀಸ್: ಎಮೋಷನಲ್ ಡ್ರಾಮಾದಲ್ಲಿ ಅಬ್ಬರಿಸಲು ಸಜ್ಜಾದ ಸ್ಟಾರ್! 250 ಕೋಟಿ ಗಳಿಕೆ ಮಾಡಿದ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ (box office) ಈ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಎರಡನೇ ವಾರ ಮುಗಿಯುವ ವೇಳೆಗೆ ಸಿನಿಮಾ ವಿಶ್ವಾದ್ಯಂತ 187 ಕೋಟಿ ರೂಪಾಯಿಗೂ ಹೆಚ್ಚು ಗಳಿಸಿತ್ತು. ನಂತರ ಮೂರನೇ ವಾರದಲ್ಲಿ 200 ಕೋಟಿ ರೂಪಾಯಿ ಗಡಿ ದಾಟಿದೆ. ಈವರೆಗಿನ ಸಿನಿಮಾದ ಒಟ್ಟು ಗಳಿಕೆ ೨೫೦ ಕೋಟಿ ದಾಟಿದೆ. ಓಟಿಟಿಯಲ್ಲೂ ಸಿನಿಮಾಕ್ಕೆ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ. ಕೆಲವರು ಸ್ಕ್ರೀನ್ ಪ್ಲೇ ಬಗ್ಗೆ ತಗಾದೆ ತೆಗೆದರೂ ಸಿನಿಮಾ ಅವನ್ನೆಲ್ಲ ಮೀರಿ ಯಶಸ್ವಿಯಾಗಿದೆ. ಹಿಂಸೆ, ದ್ವೇಷ, ಕ್ರೌರ್ಯ ಇತ್ಯಾದಿ ನೆಗೆಟಿವಿಟಿಯ ಎಕ್ಸ್‌ಟ್ರೀಮ್‌ಗಳಿಲ್ಲದೇ ಸುಮ್ಮನೆ ಕೂತು ನಕ್ಕು ಹಗುರಾಗುವ ಸಿನಿಮಾವಿದು.



