file_00000000aae08206b865c37b9c3fca2d.png
Spread the love

ಕುಂದಾಪುರ: ದಿನಾಂಕ:14-09-2026(ಹಾಯ್ ಉಡುಪಿ ನ್ಯೂಸ್) ಕೇರಳದಿಂದ ಮಡ್ಗಾಂವ್ ಗೆ ತೆರಳುತ್ತಿದ್ದ ರೈಲು ಪ್ರಯಾಣಿಕರೋರ್ವರ ಚಿನ್ನಾಭರಣವನ್ನು ಯಾರೋ ಕಳ್ಳರು ಕಳ್ಳತನ ನಡೆಸಿದ್ದಾರೆಂದು ಬೆನ್ನಿ ಥಾಮಸ್ ಎಂಬವರು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಕೇರಳ, ಕಾಸರಗೋಡು ನಿವಾಸಿ ಬೆನ್ನಿ ಥಾಮಸ್ ಎಂಬವರು  ದಿನಾಂಕ 06/06/2026 ರಂದು ಮಂಗಳೂರಿನಿಂದ ಮಡ್ಗಾಂವ್‌ಗೆ ರೈಲು ಸಂಖ್ಯೆ 12617 ರಲ್ಲಿ ತನ್ನ ಕುಟುಂಬದೊಂದಿಗೆ ರಾತ್ರಿ ಸುಮಾರು 21:30 ಗಂಟೆಗೆ ರೈಲು ಹತ್ತಿದ್ದು, ಬೆನ್ನಿ ಥಾಮಸ್ ರ  ಪತ್ನಿ ಸೀಟ್ ಸಂಖ್ಯೆ 7 ರ ಪಕ್ಕದ ಕುಟುಂಬದೊಂದಿಗೆ ಪ್ರಯಾಣಿಸಿದ್ದು, ಅವರು ಗಾಢ ನಿದ್ರೆಯಲ್ಲಿದ್ದಾಗ, ರೈಲು ಒಂದು ನಿಲ್ದಾಣದಲ್ಲಿ ನಿಂತಿತು ಮತ್ತು ಪ್ರಯಾಣಿಕರು ಇಳಿಯಲು ಓಡಾಡುತ್ತಿದ್ದರು ಆ ಸಮಯದಲ್ಲಿ ಯಾರೋ ಬೆನ್ನಿ ಥಾಮಸ್ ರ ಪತ್ನಿಯ ಚೂಡಿದಾರ್‌ನ ಜೇಬನ್ನು ಮುಟ್ಟಿದರು. ಕೆಲವೇ ನಿಮಿಷಗಳಲ್ಲಿ ಬೆನ್ನಿ ಥಾಮಸ್ ರ  ಹೆಂಡತಿ ಎಚ್ಚರಗೊಂಡು ನೋಡಿದಾಗ. ಅವರ ಚೂಡಿದಾರದ ಜೇಬಿನಲ್ಲಿದ್ದ ಸರ (ಸುಮಾರು 12 ಗ್ರಾಂ ತೂಕ ಮತ್ತು ಸುಮಾರು 1.5 ಲಕ್ಷ ರೂ. ಮೌಲ್ಯದ್ದು) ಕಾಣೆಯಾಗಿರುವುದು ಗಮನಕ್ಕೆ ಬಂದಿತು. ಬೆನ್ನಿ ಥಾಮಸ್ ರ ಹೆಂಡತಿ ತಕ್ಷಣವೇ ಈ ವಿಷಯ ತಿಳಿಸಿದರು ಅಷ್ಟರಲ್ಲಾಗಲೇ ರೈಲು ಕುಂದಾಪುರ ನಿಲ್ದಾಣದಿಂದ ಮುಂದೆ ಸಾಗಿತ್ತು ಎಂದು ಬೆನ್ನಿ ಥಾಮಸ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ: 49/2026 ಕಲಂ: 305(C) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!