ಕಾರ್ಕಳ: ದಿನಾಂಕ:11/09/2026 (ಹಾಯ್ ಉಡುಪಿ ನ್ಯೂಸ್) ಕಲ್ಯಾ ಗ್ರಾಮದ ಕುಂಟಾಡಿಯಲ್ಲಿ ಅಕ್ರಮವಾಗಿ ಕಲ್ಲು ಕೋರೆಯಲ್ಲಿ ಸ್ಫೋಟಕ ಬಳಸಿ ಕಲ್ಲುಗಳನ್ನು ಪುಡಿ ಮಾಡುತ್ತಿದ್ದ ಆರೋಪಿಗಳನ್ನು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಪ್ರಸನ್ನ ಎಂ.ಎಸ್ ಅವರು ಬಂಧಿಸಿದ್ದಾರೆ.
ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಪ್ರಸನ್ನ ಎಂ.ಎಸ್ ಅವರು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನಲ್ಲಿ ದಿನಾಂಕ:10-09-2026ರಂದು ರೌಂಡ್ಸ್ ಕರ್ತವ್ಯದಲ್ಲಿರುವಾಗ ರಾತ್ರಿ 20:00 ಘಂಟೆ ಸಮಯಕ್ಕೆ ಕಾರ್ಕಳ ತಾಲೂಕು ಕಲ್ಯಾ ಗ್ರಾಮದ ಕುಂಟಾಡಿ ಮಣ್ಣು ರಸ್ತೆಯಲ್ಲಿ KL 10 BJ 7942 ಟಿಪ್ಪರ್ ಲಾರಿಯೊಂದನ್ನು ಹಿಂಬಾಲಿಸಿ ಕೊಂಡು ಹೋಗಿ ಕೋರೆ ಬಳಿ ನಿಲ್ಲಿಸಿದಾಗ ಅದನ್ನು ನೋಡಿದಾಗ ಅದು ಖಾಲಿ ಇದ್ದು ಆ ಸ್ಥಳದಲ್ಲಿ KL 65 V 0865 ಮತ್ತು KL 85 C 2992 ನಂಬರ್ ನ ಲಾರಿಗಳು ಕಲ್ಲುಗಳನ್ನು ಲೋಡ್ ಮಾಡಿ ನಿಲ್ಲಿಸಿದ್ದು ಕೋರೆಯ ಪಕ್ಕದಲ್ಲಿ ಹಿಟಾಚಿ ವಾಹನ ಇದ್ದು ಅದರ ಬಳಿ ಇರುವ ವ್ಯಕ್ತಿಗಳನ್ನು ವಿಚಾರಿಸಿದಾಗ ನಮೂದಿಸಿದ ಆರೋಪಿತರು ಆ ಸ್ಥಳದಲ್ಲಿ ಯಾವುದೇ ಪರವಾನಿಗೆ ಪಡೆಯದೆ ಸ್ಪೋಟಕವನ್ನು ಬಳಸಿ ಕಲ್ಲು ಪುಡಿಮಾಡಿ ಸಾಗಾಟ ಮಾಡುತ್ತಿರುವುದಾಗಿ ತಿಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಅಪರಾಧ ಕ್ರಮಾಂಕ:71/2026 ಕಲಂ:288 ಜೊತೆಗೆ 3(5) ಬಿಎನ್‌ಎಸ್ ಮತ್ತು 9(ಬಿ) ಸ್ಪೋಟಕ ಕಾಯ್ದೆ 1984 ರಂತೆ ಪ್ರಕರಣವನ್ನು ದಾಖಲಿಸಲಾಗಿದೆ.
