IMG20260909122333.jpg
Spread the love

ಉಡುಪಿ: ದಿನಾಂಕ:09-09-2026(ಹಾಯ್ ಉಡುಪಿ ನ್ಯೂಸ್) ನಗರದ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯ ಮುಂಭಾಗದ ಮುಖ್ಯ ರಸ್ತೆಯಲ್ಲಿ ವ್ಯಕ್ತಿಯೋರ್ವರು ದ್ವಿಚಕ್ರ ವಾಹನದಲ್ಲಿ ಕ್ಯಾನ್ ನಲ್ಲಿ ಐದು ಲೀಟರ್ ಆಯಿಲ್ ತೆಗೆದು ಕೊಂಡು ಹೋಗುತ್ತಿದ್ದಾಗ ಹಠಾತ್ತನೆ ಕ್ಯಾನ್ ಜಾರಿ ಕೆಳಗೆ ಬಿದ್ದು ಒಡೆದು ರಸ್ತೆ ತುಂಬಾ ಆಯಿಲ್ ಚೆಲ್ಲಿತು.

ರಸ್ತೆಯಲ್ಲಿ ಬಿದ್ದಿದ್ದ ಆಯಿಲ್ ಮೇಲೆ ಸಾಗುತ್ತಿದ್ದ ದ್ವಿಚಕ್ರ ವಾಹನ ಸವಾರರು ಬಿದ್ದು ಅಪಘಾತ ವಾಗುತ್ತಿರುವ ವಿಷಯ ತಿಳಿದ ಕೂಡಲೇ ಉಡುಪಿ ಅಗ್ನಿಶಾಮಕ ದಳದವರು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಿನಾಯಕ ಕಲಗುಟಕರ್ ಅವರ ನೇತೃತ್ವದಲ್ಲಿ ಕೂಡಲೇ ಬಂದು ರಸ್ತೆ ಗೆ ನೀರು ಹರಿಸುವ ಮೂಲಕ ರಸ್ತೆ ಯಲ್ಲಿ ಬಿದ್ದಿದ್ದ ಆಯಿಲ್ ತೆರವು ಗೊಳಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟರು.

error: No Copying!