HRdVItGa8AAVZ8F.jpg
Spread the love

ದಿನಾಂಕ:05-09-2026(ಹಾಯ್ ಉಡುಪಿ ನ್ಯೂಸ್)

‘ಬಳ್ಳಾರಿ ಚಲೋ’ ಜನಾಂದೋಲನದ ನಡುವೆ ಇಂದು ಮರಳಿ ಗ್ರಾಮದಲ್ಲಿ ನಮ್ಮ ಅನ್ನದಾತರಾಗಿರುವ ಕೃಷಿಕ ಬಂಧುಗಳೊಂದಿಗೆ ಬಿ.ವೈ.ವಿಜಯೇಂದ್ರ ಸಂವಾದ ನಡೆಸಿ, ಅವರು ಎದುರಿಸುತ್ತಿರುವ ಸವಾಲುಗಳು ಮತ್ತು ನೈಜ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಚರ್ಚಿಸಿದರು. ನೆಲವನ್ನೇ ನಂಬಿ, ಕಠಿಣ ಶ್ರಮದಿಂದ ನಾಡಿಗೆ ಅನ್ನ ನೀಡುವ ನಮ್ಮ ನೇಗಿಲಯೋಗಿಗಳ ಹಿತರಕ್ಷಣೆ ಆಡಳಿತಾತ್ಮಕ ಕರ್ತವ್ಯ.

ಆದರೆ, ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿಗಳು, ಸಾಲು ಸಾಲು ಪ್ರಮಾದಗಳಿಂದ ಬೆಳೆ ಪರಿಹಾರ ಸಿಗದೆ, ಬೆಂಬಲ ಬೆಲೆಯೂ ಇಲ್ಲದೆ ನಮ್ಮ ಅನ್ನದಾತರು ತಮ್ಮ ತೀವ್ರ ಸಂಕಷ್ಟದ ಪರಿಸ್ಥಿತಿಗಳ ಬಗ್ಗೆ ವಿವರಿಸಿದರು. ಗ್ಯಾರಂಟಿಗಳ ನೆಪ ಹೇಳುತ್ತಾ ನೀರಾವರಿ ಯೋಜನೆಗಳು ಹಾಗೂ ಕೃಷಿ ಕ್ಷೇತ್ರಕ್ಕೆ ಸಿಗಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸದೆ ಈ ಕಾಂಗ್ರೆಸ್ ಸರ್ಕಾರದ ಭ್ರಷ್ಟ ಆಡಳಿತದ ವಿರುದ್ಧ ರೈತರಲ್ಲಿ ಭಾರಿ ಆಕ್ರೋಶವಿದೆ. ಅನ್ನದಾತರ ಕಣ್ಣೀರ ಕಡೆಗೆ ತಿರುಗಿಯೂ ನೋಡದ ಈ ಲೂಟಿಕೋರ ಸರ್ಕಾರದ ವಿರುದ್ಧ ರೈತರ ಆಕ್ರೋಶಕ್ಕೆ ನಮ್ಮ ಪಾದಯಾತ್ರೆ ಧ್ವನಿ ನೀಡಿದೆ. ರಾಜ್ಯ ಸರ್ಕಾರ ಕೂಡಲೇ ಪ್ರತಿಯೊಬ್ಬ ರೈತನ 5 ಲಕ್ಷ ರೂ.ವರೆಗಿನ ಕೃಷಿ ಸಾಲ ಮನ್ನಾ, ಸೂಕ್ತ ಬೆಳೆ ನಷ್ಟ ಪರಿಹಾರ ಬಿಡುಗಡೆ ಹಾಗೂ ಸಂಕಷ್ಟದಲ್ಲಿರುವ ಎಲ್ಲಾ ತಾಲ್ಲೂಕುಗಳನ್ನು ತಕ್ಷಣವೇ ‘ಬರಪೀಡಿತ’ ಎಂದು ಘೋಷಿಸಬೇಕು. ನಮ್ಮ ರೈತರಿಗೆ ನ್ಯಾಯ ಸಿಗುವ ವರೆಗೂ ನಮ್ಮ ಹೋರಾಟ ನಿಲ್ಲದು ಎಂದು ಬಿವೈ.ವಿಜಯೇಂದ್ರ ಹೇಳಿದರು..

error: No Copying!