ಕರ್ನಾಟಕದ ಸಮಗ್ರ ಕೈಗಾರಿಕಾ ಪ್ರಗತಿ ಹಾಗೂ ಯುವಜನತೆಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಇಂದು ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಇಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಸಭೆಯಲ್ಲಿ ಕೈಗೊಂಡ ಪ್ರಮುಖ ತೀರ್ಮಾನಗಳು:
- ಒಟ್ಟು ₹29,679 ಕೋಟಿ ಬಂಡವಾಳ ಹೂಡಿಕೆಯ 9 ಹೊಸ ಹಾಗೂ 8 ಹೆಚ್ಚುವರಿ ವಿಸ್ತರಣಾ ಯೋಜನೆಗಳಿಗೆ ಅನುಮೋದನೆ
- ಈ ಎಲ್ಲಾ ಯೋಜನೆಗಳ ಮೂಲಕ ರಾಜ್ಯದ ಯುವಜನತೆಗೆ ಒಟ್ಟು 66,360 ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ.
- ಹೊಸ ಹೂಡಿಕೆಗಳು: ಹೀರೋ ಫ್ಯೂಚರ್ ಎನರ್ಜೀಸ್ (₹9,760 ಕೋಟಿ – 3,200 ಉದ್ಯೋಗ), ನಿರಾಣಿ ಶುಗರ್ಸ್ (₹4,062 ಕೋಟಿ), ಟ್ರೂಆಲ್ಟ್ ಬಯೋ ಎನರ್ಜಿ (₹2,988 ಕೋಟಿ), ಮಹೀಂದ್ರ ಏರೋಸ್ಟ್ರಕ್ಚರ್ಸ್ (₹2,300 ಕೋಟಿ – 3,000 ಉದ್ಯೋಗ), ವೈಬ್ರನ್ಸಿ ರಿನ್ಯೂವೇಬಲ್ ಎನರ್ಜೀಸ್ (₹2,194.94 ಕೋಟಿ – 30,000 ಉದ್ಯೋಗ), ಎಪ್ಸಿಲಾನ್ (₹1,500 ಕೋಟಿ), ಟೊಯೋಟಾ ಕಿರ್ಲೋಸ್ಕರ್ (₹1,200 ಕೋಟಿ), ಏಕಸ್ ಕನ್ಸೂಮರ್ ಪ್ರಾಡಕ್ಟ್ಸ್ (₹1,104 ಕೋಟಿ – 4,813 ಉದ್ಯೋಗ), ಲೈಟ್‌ಹೌಸ್ ಆಲ್ಟರ್ನೇಟಿವ್ ಅಸೆಟ್ಸ್ (₹600 ಕೋಟಿ).
- ಹೆಚ್ಚುವರಿ ಬಂಡವಾಳ ಹೂಡಿಕೆಗಳು: ಟಿವಿಎಸ್ ಮೋಟರ್ಸ್ (₹1,050 ಕೋಟಿ), ಎಂಎಸ್‌ಪಿಎಲ್ (₹884.25 ಕೋಟಿ), ಭೀಮಾ ಫೈನ್ ಕೆಮಿಕಲ್ಸ್ (₹605 ಕೋಟಿ), ಸನ್ಸೇರಾ (₹492.24 ಕೋಟಿ), ಹೋಂಡಾ ಕಾರ್ಸ್ (₹437 ಕೋಟಿ), ಎನ್‌ಶ್ಯೂರ್ ರಿಲಯನ್ಸ್ ಪವರ್ ಸೊಲ್ಯೂಷನ್ಸ್ (₹250 ಕೋಟಿ), ಹ್ಯಾವೆಲ್ಸ್ ಇಂಡಿಯಾ (₹250 ಕೋಟಿ).
- ಪಾರದರ್ಶಕತೆಗೆ ಆಡಿಟ್ ಕಡ್ಡಾಯ: ಕೈಗಾರಿಕೆಗಳಿಗೆ ಪರವಾನಗಿ ನೀಡುವ ಪೂರ್ವದಲ್ಲಿ ಪ್ರಾಜೆಕ್ಟ್ ರಿಪೋರ್ಟ್‌ಗಳ ಸಮಗ್ರ ಪರಿಶೀಲನೆ ನಡೆಸಲು ಹಾಗೂ ಕಡ್ಡಾಯ ಆಡಿಟ್‌ಗಾಗಿ ಹೊಸ ಆಡಿಟ್ ತಂಡ ರಚಿಸಲು ಹಣಕಾಸು ಇಲಾಖೆಗೆ ಸ್ಪಷ್ಟ ಸೂಚನೆ ನೀಡಲಾಗಿದೆ.
- ಕೈಗಾರಿಕಾ ವಿಸ್ತರಣೆಗೆ ಬೆಂಬಲ: ನೂತನ ಕೈಗಾರಿಕಾ ನೀತಿಯ ಎಲ್ಲಾ ನಿಯಮಗಳನ್ನು ಚಾಚೂತಪ್ಪದೆ ಪಾಲಿಸಿ, ಹೊಸ ಕೈಗಾರಿಕೆಗಳ ಸ್ಥಾಪನೆ ಹಾಗೂ ಹಳೆಯ ಘಟಕಗಳ ವಿಸ್ತರಣೆಗೆ ಪೂರ್ಣ ಸಹಕಾರ ನೀಡಲು ನಿರ್ದೇಶಿಸಲಾಗಿದೆ.


